ADVERTISEMENT

Union Budget 2025 | ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತಾರಾಮನ್

ಪಿಟಿಐ
Published 31 ಜನವರಿ 2025, 8:32 IST
Last Updated 31 ಜನವರಿ 2025, 8:32 IST
   

ನವದೆಹಲಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2024-25ನೇ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆ ಆರ್ಥಿಕ ಸಮೀಕ್ಷೆಯಾಗಿದೆ.

ಇದು ಅಲ್ಪಾವಧಿಯಿಂದ ಮಧ್ಯಮ ಅವಧಿಯ ಆರ್ಥಿಕತೆಯ ನಿರೀಕ್ಷೆಗಳ ಅವಲೋಕನವನ್ನು ಸಹ ಒದಗಿಸುತ್ತದೆ.

ADVERTISEMENT

ಮುಖ್ಯ ಆರ್ಥಿಕ ಸಲಹೆಗಾರರ ​​ಮೇಲ್ವಿಚಾರಣೆಯಲ್ಲಿ ಈ ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸಲಾಗಿದೆ.

ಮೊದಲ ಆರ್ಥಿಕ ಸಮೀಕ್ಷೆಯು 1950-51ರಲ್ಲಿ ಬಜೆಟ್ ದಾಖಲೆಗಳ ಭಾಗವಾಗಿ ಅಸ್ತಿತ್ವಕ್ಕೆ ಬಂದಿತ್ತು.

1960ರ ದಶಕದಲ್ಲಿ, ಇದನ್ನು ಕೇಂದ್ರ ಬಜೆಟ್‌ನಿಂದ ಪ್ರತ್ಯೇಕಿಸಲಾಯಿತು. ಬಜೆಟ್ ಮಂಡನೆಗೆ ಒಂದು ದಿನ ಮೊದಲು ಮಂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.