ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮತ್ತೊಂದು ಬಜೆಟ್ ಮಂಡನೆಯಾಗಿದೆ. ಇತಿಹಾಸದಲ್ಲಿ ಎರಡನೇ ಬಾರಿಗೆ ಭಾನುವಾರದಂದು ಬಜೆಟ್ ಮಂಡನೆಯಾಗಿದ್ದು ಒಂದು ವಿಶೇಷವಾದರೆ, ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿ ಮಂಡಿಸಿದ ಬಜೆಟ್ ಎಂಬುದು ಮತ್ತೊಂದು ವಿಶೇಷ. ಈ ಬಾರಿ ಜನಸಾಮಾನ್ಯರನ್ನು ಗಮನದಲ್ಲಿಟ್ಟು ಬಜೆಟ್ ಮಂಡಿಸುವುದಾಗಿ ಮೊದಲೇ ನಿರ್ಮಲಾ ಘೋಷಿಸಿದ್ದರು. ಹಾಗೆಯೇ ಸಾಮಾನ್ಯ ಜನರಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಅಲ್ಲದೇ ಈ ವರ್ಷ ನಡೆಯಲಿರುವ ಪಂಚರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಒಂದಷ್ಟು ಜನಪ್ರಿಯ ಘೋಷಣೆಗಳು ಇರಬಹುದು ಎಂದೂ ನಿರೀಕ್ಷಿಸಲಾಗಿತ್ತು. ಜತೆಗೆ ಏರುತ್ತಿರುವ ಚಿನ್ನದ ಬೆಲೆ, ಅಂತಾರರಾಷ್ಟ್ರೀಯ ಬೆಳವಣಿಗೆ, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರಕಾರದ ಸುಂಕ ನೀತಿ ಇವುಗಳೆಲ್ಲದರ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಮುಂಗಡಪತ್ರದ ಬಗ್ಗೆ ಸಾಕಷ್ಟು ಕುತೂಹಲಗಳಿದ್ದವು. ಆದರೆ ಯಾವುದೇ ಅಬ್ಬರವಾಗಲೀ, ಘೋಷಣೆಯಾಗಲೀ ಇಲ್ಲದ, ತೆರಿಗೆ ವಿಚಾರದಲ್ಲೂ ಹೆಚ್ಚಿನ ಯಾವೊಂದೂ ಬದಲಾವಣೆಯನ್ನು ಮಾಡದ ಬಜೆಟ್ ನಿಜಕ್ಕೂ ಯಾವ ದೂರಗಾಮಿ ಪರಿಣಾಮವನ್ನು ಒಳಗೊಂಡಿದೆ ಎಂಬುದರ ಬಗ್ಗೆ ಆರ್ಥಿಕ ತಜ್ಞರು ಪ್ರಜಾವಾಣಿಯ ಈ ವಿಶೇಷ ಚರ್ಚೆಯಲ್ಲಿ ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.