
ಪಿಟಿಐ
ಸಾಂದರ್ಭಿಕ ಚಿತ್ರ
ನವದೆಹಲಿ: ನಗರಾಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ, ಬೆಂಗಳೂರು, ಸೂರತ್, ವಾರಾಣಸಿ ಸೇರಿ 7 ನಗರ ಆರ್ಥಿಕ ವಲಯಗಳನ್ನು (ಸಿಇಆರ್‌ಎಸ್) ಸಾರ್ವಜನಿಕ–ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಅಭಿವೃದ್ಧಿ ಪಡಿಸಲಿದೆ. ಇದಕ್ಕಾಗಿ ಮುಂದಿನ 5 ವರ್ಷಗಳ ಅವಧಿಗೆ ಪ್ರತಿ ನಗರ ಪ್ರದೇಶಕ್ಕೆ ₹5 ಸಾವಿರ ಕೋಟಿಯಂತೆ ಅನುದಾನ ಮೀಸಲಿಡಲಾಗಿದೆ.
‘ನಗರಗಳು ದೇಶದ ಆರ್ಥಿಕ ಪ್ರಗತಿಯ ಚಾಲಕ ಶಕ್ತಿಗಳಾಗಿದ್ದು, ಆವಿಷ್ಕಾರ ಮತ್ತು ಅವಕಾಶಗಳ ಹೆಬ್ಬಾಗಿಲಾಗಿವೆ‘ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘5 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಎರಡು ಮತ್ತು ಮೂರನೆಯ ಹಂತದ ನಗರಗಳು, ತೀರ್ಥಕ್ಷೇತ್ರಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸುವುದೂ ಈ ಯೋಜನೆಯಲ್ಲಿ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.