ADVERTISEMENT

ಬಜೆಟ್‌ನಲ್ಲಿ ‘ಕರ್ತವ್ಯ ಮಂತ್ರ’ ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 6:06 IST
Last Updated 1 ಫೆಬ್ರುವರಿ 2026, 6:06 IST
<div class="paragraphs"><p>ಸಂಸತ್‌ನಲ್ಲಿ  ನಿರ್ಮಲಾ ಸೀತಾರಾಮನ್&nbsp;ಬಜೆಟ್ ಭಾಷಣ</p></div>

ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ

   

– ಪಿಟಿಐ ಚಿತ್ರ

ನವದೆಹಲಿ: ಬಡವರ ಬಗ್ಗೆ ಗಮನ ಹರಿಸುವುದು ನಮ್ಮ ಸರ್ಕಾರದ ಸಂಕಲ್ಪ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ADVERTISEMENT

ಬಜೆಟ್ ಭಾಷಣದ ಆರಂಭದಲ್ಲಿಯೇ ‘ಈ ಸಂಕಲ್ಪವನ್ನು ನೆರವೇರಿಸಲು ಕರ್ತವ್ಯ ಭವನದಲ್ಲಿ ತಯಾರಿಸಲಾದ ಮೊದಲ ಬಜೆಟ್‌ ಮೂರು ಕರ್ತವ್ಯಗಳಿಂದ ಪ್ರೇರಿತಗೊಂಡಿದೆ’ ಎಂದು ಅವರು ಹೇಳಿದರು.

ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವುದು ನಮ್ಮ ಮೊದಲ ಕರ್ತವ್ಯವಾಗಿದೆ.

ಜನರ ಆಶೋತ್ತರಗಳನ್ನು ಈಡೇರಿಸುವುದು ಮತ್ತು ದೇಶದ ಅಭಿವೃದ್ಧಿಯಲ್ಲಿ ಬಲಿಷ್ಠ ಪಾಲುದಾರರಾಗುವಂತೆ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ಎರಡನೇ ಕರ್ತವ್ಯ.

‘ನಮ್ಮ ಮೂರನೇ ಕರ್ತವ್ಯ ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಆಧರಿತವಾಗಿದ್ದು, ಪ್ರತಿ ಕುಟುಂಬ, ಸಮುದಾಯ, ಧರ್ಮ ಹಾಗೂ ವಿಭಾಗಗಳಿಗೆ ಸಂಪನ್ಮೂಲಗಳ ಬಳಕೆಗೆ ಅವಕಾಶ ನೀಡುವುದಾಗಿದೆ’ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.