ADVERTISEMENT

Video | ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾಗೆ ಮೊಸರು–ಸಕ್ಕರೆ ತಿನಿಸಿದ ಮುರ್ಮು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 5:07 IST
Last Updated 1 ಫೆಬ್ರುವರಿ 2026, 5:07 IST
<div class="paragraphs"><p>ರಾಷ್ಟ್ರಪತಿ&nbsp;ದ್ರೌಪದಿ ಮುರ್ಮು ಅವರು&nbsp;ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು–ಸಕ್ಕರೆ ತಿನಿಸಿ ಶುಭ ಕೋರಿದ್ದಾರೆ.</p></div>

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು–ಸಕ್ಕರೆ ತಿನಿಸಿ ಶುಭ ಕೋರಿದ್ದಾರೆ.

   

ನವದೆಹಲಿ: 2026–27ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು(ಭಾನುವಾರ) ಮಂಡಿಸಲಿದ್ದಾರೆ.

ಸಂಪ್ರದಾಯದಂತೆ ಸಂಸತ್ತಿಗೆ ತೆರಳುವ ಮುನ್ನ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ADVERTISEMENT

ಈ ವೇಳೆ ದ್ರೌಪದಿ ಮುರ್ಮು ಅವರು ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು–ಸಕ್ಕರೆ ತಿನಿಸಿ ಶುಭ ಕೋರಿದ್ದಾರೆ.

ರಾಷ್ಟ್ರಪತಿ ಭವನಕ್ಕೆ ಹೋಗುವ ಮೊದಲು, ಸೀತಾರಾಮನ್ ತಮ್ಮ ಬಜೆಟ್ ತಂಡದ ಸದಸ್ಯರೊಂದಿಗೆ ಕರ್ತವ್ಯ ಭವನದ ಮುಂದೆ ರಾಷ್ಟ್ರೀಯ ಲಾಂಛನವಿರುವ ಟ್ಯಾಬ್ಲೆಟ್ ಅನ್ನು ಪ್ರದರ್ಶಿಸಿದರು. ಈ ಬಾರಿ ನಿರ್ಮಲಾ ಅವರು ಕೆನ್ನೇರಳೆ ಬಣ್ಣದ ತಮಿಳುನಾಡಿದ ಕಾಂಚೀವರಂ ಸೀರೆ ಧರಿಸಿ, ಶಾಲು ತೊಟ್ಟು ಬಂದಿದ್ದಾರೆ.

ಈ ವೇಳೆ ಸಚಿವ ಪಂಕಜ್ ಚೌಧರಿ ಸೇರಿದಂತೆ ಸಚಿವಾಲಯದ ಆರು ಕಾರ್ಯದರ್ಶಿಗಳು ನಿರ್ಮಲಾಗೆ ಸಾಥ್‌ ನೀಡಿದ್ದಾರೆ.

ಸತತ 9ನೇ ಬಾರಿಗೆ ಬಜೆಟ್‌ ಮಂಡಿಸಲು ಸಜ್ಜಾಗಿರುವ ನಿರ್ಮಲಾ ಸೀತಾರಾಮನ್, ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಿದ್ದಾರೆ.

ಈ ಬಾರಿಯ ಬಜೆಟ್‌ ಮೇಲೆ ಮಧ್ಯಮ ವರ್ಗದವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಜನಸಾಮಾನ್ಯರಿಗೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಏನೆಲ್ಲಾ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.