ADVERTISEMENT

ಎನ್‌ಡಿಟಿವಿ ವಾದ ತಳ್ಳಿಹಾಕಿದ ಅದಾನಿ ಸಮೂಹ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:20 IST
Last Updated 26 ಆಗಸ್ಟ್ 2022, 16:20 IST
   

ನವದೆಹಲಿ: ಆರ್‌ಆರ್‌‍ಪಿಆರ್‌ ಲಿಮಿಟೆಡ್‌ನ ಷೇರುಗಳ ಸ್ವಾಧೀನಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅನುಮೋದನೆ ಅಗತ್ಯವಿದೆ ಎಂಬ ಎನ್‌ಡಿಟಿವಿ ವಾದವನ್ನು ಅದಾನಿ ಸಮೂಹವು ಶುಕ್ರವಾರ ತಳ್ಳಿಹಾಕಿದೆ.

ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರಿಗೆ ಸೆಬಿ ನೀಡಿರುವ ಆದೇಶವು ಪ್ರವರ್ತಕರ ಕಂಪನಿಗೆ ಅನ್ವಯವಾಗುವುದಿಲ್ಲ ಎಂದು ಅದಾನಿ ಸಮೂಹವು ವಾದಿಸಿದೆ.

ಆರ್‌ಆರ್‌ಪಿಆರ್‌ ಎತ್ತಿರುವ ಪ್ರಶ್ನೆಗಳು ಆಧಾರರಹಿತ ಎಂದು ಹೇಳಿರುವ ಅದಾನಿ ಸಮೂಹಕ್ಕೆ ಸೇರಿರುವ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈ.ಲಿ. (ವಿಸಿಪಿಎಲ್), ಪ್ರವರ್ತಕರ ಕಂಪನಿಯು ತಕ್ಷಣದಲ್ಲಿಯೇ ಈಕ್ವಿಟಿ ಷೇರುಗಳನ್ನು ವರ್ಗಾವಣೆ ಮಾಡಬೇಕು ಎಂದು ಹೇಳಿದೆ.

ADVERTISEMENT

ಸೆಬಿಯು 2020ರ ನವೆಂಬರ್ 27ರಂದು ನೀಡಿದ ಆದೇಶದಲ್ಲಿ ಆರ್‌ಆರ್‌ಪಿಆರ್‌ ವಾದಿ ಅಥವಾ ಪ್ರತಿವಾದಿ ಆಗಿರಲೇ ಇಲ್ಲ. ಹೀಗಾಗಿ, ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರು ಎರಡು ವರ್ಷಗಳ ಅವಧಿಗೆ ಷೇರು ವಹಿವಾಟಿನಲ್ಲಿ ತೊಡಗುವಂತಿಲ್ಲ ಎಂದು ಸೆಬಿ ನೀಡಿರುವ ಆದೇಶವು ಪ್ರವರ್ತಕರ ಕಂಪನಿಗೆ ಅನ್ವಯವಾಗದು ಎಂದು ವಿಸಿಪಿಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.