ADVERTISEMENT

ಆರ್ಥಿಕತೆ ಬೆಳವಣಿಗೆ ಚೇತರಿಕೆ: ಆರ್‌ಬಿಐ ವರದಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 16:14 IST
Last Updated 24 ಡಿಸೆಂಬರ್ 2024, 16:14 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆ ಇಳಿಕೆಯಾಗಿತ್ತು. ಆದರೆ, ಸದೃಢವಾದ ಹಬ್ಬದ ಚಟುವಟಿಕೆ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ಖರೀದಿಸುವ ಸಾಮರ್ಥ್ಯ ಹೆಚ್ಚಳವಾಗಿದೆ. ಇದರಿಂದ  ಚೇತರಿಕೆಯ ಹಾದಿಗೆ ಮರಳಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಆರ್‌ಬಿಐ) ಮಾಸಿಕ ವರದಿ ಮಂಗಳವಾರ ತಿಳಿಸಿದೆ. 

ಸ್ಥಿರವಾದ ಬೆಳವಣಿಗೆ ಮತ್ತು ಹಣದುಬ್ಬರ ಇಳಿಕೆಯಾಗುವ ಜೊತೆಗೆ ಜಾಗತಿಕ ಆರ್ಥಿಕತೆ ನಿರಂತರವಾಗಿ ಚೇತರಿಕೆ ಕಾಣಲಿದೆ ಎಂದು ಡಿಸೆಂಬರ್‌ ತಿಂಗಳ ಆರ್ಥಿಕ ಪರಿಶೀಲನಾ ವರದಿಯಲ್ಲಿ ತಿಳಿಸಿದೆ.

ಆರ್ಥಿಕ ವಿಶ್ಲೇಷಣೆ ಮತ್ತು ವಹಿವಾಟಿಗೆ ಬಳಸುವ ಸೂಚ್ಯಂಕಗಳಾದ ಹೈ–ಫ್ರೀಕ್ವೆನ್ಸಿ ಸೂಚ್ಯಂಕ (ಎಚ್ಎಫ್‌ಐ) ಪ್ರಕಾರ ಡಿಸೆಂಬರ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ಚೇತರಿಕೆ ಕಾಣಲಿದೆ ಎಂದು ಹೇಳಿದೆ.

ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ 5.4ರಷ್ಟು ದಾಖಲಾಗಿತ್ತು. ಇದು ಎರಡು ವರ್ಷದ ಕನಿಷ್ಠ ಮಟ್ಟವಾಗಿತ್ತು. 

ಹಿಂಗಾರು ಹಂಗಾಮಿನಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜೊತೆಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಖರೀದಿಸುವ ಸಾಮರ್ಥ್ಯ ಹೆಚ್ಚಳವಾಗಿದೆ ಎಂದು ಹೇಳಿದೆ. ಈ ವರದಿಯನ್ನು ಆರ್‌ಬಿಐ ಡೆಪ್ಯುಟಿ ಗವರ್ನರ್ ಮೈಕಲ್ ಅವರ ನೇತೃತ್ವದ ತಂಡವು ಸಿದ್ಧಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.