ADVERTISEMENT

ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2023, 16:26 IST
Last Updated 14 ಫೆಬ್ರುವರಿ 2023, 16:26 IST
ಬೋಯಿಂಗ್‌ ವಿಮಾನ
ಬೋಯಿಂಗ್‌ ವಿಮಾನ   

ನವದೆಹಲಿ: ಟಾಟಾ ಸಮೂಹದ ಏರ್ ಇಂಡಿಯಾ ಕಂಪನಿಯು 290 ವಿಮಾನಗಳನ್ನು ಖರೀದಿಸಲಿದೆ ಎಂದು ಬೋಯಿಂಗ್‌ ತಿಳಿಸಿದೆ.

ಏರ್ ಇಂಡಿಯಾ ಕಂಪನಿಯು ಸಣ್ಣ ದೇಹದ 190 ಬೋಯಿಂಗ್‌ 737 ಮ್ಯಾಕ್ಸ್‌, 20 ಬೋಯಿಂಗ್‌ 787 ಮತ್ತು 10 ಬೋಯಿಂಗ್‌ 777ಎಕ್ಸ್‌, ಹೆಚ್ಚುವರಿಯಾಗಿ 50 ಬೋಯಿಂಗ್‌ 737 ಮ್ಯಾಕ್ಸ್‌, 20 ಬೋಯಿಂಗ್‌ 787–9s ವಿಮಾನಗಳನ್ನು ಖರೀದಿಸಲಿದೆ ಎಂದು ಬೋಯಿಂಗ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬೋಯಿಂಗ್‌ ಕಂಪನಿಯೊಂದಿಗೆ ಜನವರಿ 27ರಂದು ಒಪ್ಪಂದ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಟಾಟಾ ಸಮೂಹವು ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿದ್ದು, ಇದು ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದವಾಗಿದೆ ಎಂದು ವರದಿಯಾಗಿದೆ.

ಈ ಒಪ್ಪಂದವು 40 A350 (ವೈಡ್ ಬಾಡಿ) ದೀರ್ಘ ಶ್ರೇಣಿಯ ವಿಮಾನಗಳು ಮತ್ತು 210 ಕಿರಿದಾದ (ಸಣ್ಣ ದೇಹದ) ವಿಮಾನಗಳನ್ನು ಖರೀದಿಸಲು ಟಾಟಾ ಸಮೂಹದ ಏರ್ ಇಂಡಿಯಾ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.