
ಅಮೆಜಾನ್
–ರಾಯಿಟರ್ಸ್ ಚಿತ್ರ
ಸ್ಯಾನ್ ಫ್ರಾನ್ಸಿಸ್ಕೊ: ಅಮೆಜಾನ್ ಕಂಪನಿಯು ತನ್ನ ನೌಕರರ ಸಂಖ್ಯೆಯನ್ನು 14 ಸಾವಿರಷ್ಟು ಕಡಿಮೆ ಮಾಡುತ್ತಿರುವುದಾಗಿ ಹೇಳಿದೆ. ಯಾವೆಲ್ಲ ಹಂತಗಳಲ್ಲಿ ಉದ್ಯೋಗ ಕಡಿತ ಆಗಲಿದೆ ಎಂಬುದನ್ನು ಕಂಪನಿ ತಿಳಿಸಿಲ್ಲ.
ಕಂಪನಿಯು ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದೆ. 14 ಸಾವಿರ ಹುದ್ದೆಗಳ ಕಡಿತದ ಹೇಳಿಕೆಯನ್ನು ಕಂಪನಿಯ ಹಿರಿಯ ಉಪಾಧ್ಯಕ್ಷ ಬೆತ್ ಗಲೆಟ್ಟಿ ಅವರು ತಿಳಿಸಿದ್ದಾರೆ.
‘ಕೃತಕ ಬುದ್ಧಿಮತ್ತೆಯು ಇಂಟರ್ನೆಟ್ ನಂತರ ಅತ್ಯಂತ ಹೆಚ್ಚು ಪರಿವರ್ತನೆ ತರುವ ತಂತ್ರಜ್ಞಾನ’ ಎಂದು ಗಲೆಟ್ಟಿ ಹೇಳಿದ್ದಾರೆ. ಇದು ಕಂಪನಿಗಳಿಗೆ ಹಿಂದೆಂದಿಗಿಂತ ಹೆಚ್ಚು ವೇಗವಾಗಿ ಹೊಸದನ್ನು ಆವಿಷ್ಕರಿಸಲು ನೆರವಾಗುತ್ತಿದೆ ಎಂದು ಹೇಳಿದ್ದಾರೆ.
ಕಂಪನಿಯ ಒಟ್ಟು ನೌಕರರ ಸಂಖ್ಯೆ 15 ಲಕ್ಷಕ್ಕೂ ಹೆಚ್ಚು. ಕಂಪನಿಯ ದಾಸ್ತಾನು ಕೇಂದ್ರಗಳಲ್ಲಿ ಕೆಲಸ ಮಾಡುವವರ ಮೇಲೆ ಈ ತೀರ್ಮಾನದಿಂದ ಯಾವುದೇ ಪರಿಣಾಮ ಆಗಲಿಕ್ಕಿಲ್ಲ ಎಂದು ಗಲೆಟ್ಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.