ADVERTISEMENT

ವಿಮಾನ ಇಂಧನ ದರ ಶೇ 1.3 ಇಳಿಕೆ

ಪಿಟಿಐ
Published 1 ಜೂನ್ 2022, 10:33 IST
Last Updated 1 ಜೂನ್ 2022, 10:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಜೆಟ್‌ ಇಂಧನ) ದರವನ್ನು ಬುಧವಾರ ಶೇ 1.3ರಷ್ಟು ಕಡಿಮೆ ಮಾಡಿವೆ.

ಇದರಿಂದಾಗಿ ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರಿಗೆ ₹ 1,563ರಷ್ಟು ಕಡಿಮೆ ಆಗಿ ₹ 1.21 ಲಕ್ಷಕ್ಕೆ ತಲಿಪಿದೆ. ಮುಂಬೈನಲ್ಲಿ ₹ 1.20 ಲಕ್ಷ ಇದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್).

2022ರಲ್ಲಿ ಈವರೆಗೆ ಒಟ್ಟಾರೆ 10 ಬಾರಿ ದರ ಏರಿಕೆ ಮಾಡಿದ ಬಳಿಕ, ಇದೇ ಮೊದಲ ಬಾರಿಗೆ ದರವನ್ನು ಕಡಿಮೆ ಮಾಡಲಾಗಿದೆ. 10 ಬಾರಿ ಒಟ್ಟಾರೆ ₹ 6,188 ರಷ್ಟು ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮೇ 16ರಂದು ವಿಮಾನ ಇಂಧನ ದರವು ದಾಖಲೆಯ ₹ 1.23 ಲಕ್ಷಕ್ಕೆ ಏರಿಕೆ ಕಂಡಿತ್ತು.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಗೆ ಅನುಗುಣವಾಗಿ ವಿಮಾನ ಇಂಧನ ದರ ಕಡಿಮೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.