ನವದೆಹಲಿ: ಜರ್ಮನಿಯ ವಾಹನ ತಯಾರಿಕಾ ಕಂಪನಿ ಔಡಿ, ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಶೇ 3ರ ವರೆಗೆ ಹೆಚ್ಚಿಸಲು ನಿರ್ಧರಿಸಿದೆ.
ಹೊಸ ದರವು ಜನವರಿ 1ರಿಂದ ಜಾರಿಗೆ ಬರಲಿದೆ. ತಯಾರಿಕಾ ಮತ್ತು ಸಾಗಣೆ ವೆಚ್ಚ ಹೆಚ್ಚಳವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಕಂಪನಿ ಸೋಮವಾರ ತಿಳಿಸಿದೆ.
ಈಗಾಗಲೇ ಬಿಎಂಡಬ್ಲ್ಯು ಇಂಡಿಯಾ, ಮರ್ಸಿಡೀಸ್ ಬೆಂಜ್ ಇಂಡಿಯಾ ಸಹ ಜನವರಿ 1ರಿಂದ ವಾಹನಗಳ ದರವನ್ನು ಶೇ 3ರ ವರೆಗೆ ಏರಿಕೆ ಮಾಡುವುದಾಗಿ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.