ADVERTISEMENT

ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಂದ ಬ್ಯಾಂಕು ವಸೂಲಿ ಮಾಡಿದ ದಂಡ ₹11,500 ಕೋಟಿ!

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2018, 10:45 IST
Last Updated 4 ಆಗಸ್ಟ್ 2018, 10:45 IST
   

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ 24 ಸಾರ್ವಜನಿಕ ಬ್ಯಾಂಕ್, ಖಾಸಗಿ ಬ್ಯಾಂಕ್‍ಗಳು ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲರಾದ ಗ್ರಾಹಕರಿಂದ ವಸೂಲಿ ಮಾಡಿದ ದಂಡ ₹11,500 ಕೋಟಿ!.ಶುಕ್ರವಾರ ಲೋಕಸಭೆಯಲ್ಲಿ ವಿತ್ತ ಸಚಿವಾಲಯ ಈ ಮಾಹಿತಿ ನೀಡಿದೆ.


ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2017-18ರ ಅವಧಿಯಲ್ಲಿ ವಸೂಲಿ ಮಾಡಿದ ದಂಡದ ಮೊತ್ತ ₹2,400 ಕೋಟಿ ಆಗಿದೆ.ಖಾಸಗಿ ಬ್ಯಾಂಕ್‍ಗಳ ಪೈಕಿ ಹೆಚ್‌‍ಡಿಎಫ್‍ಸಿ ಅತೀ ಹೆಚ್ಚು ದಂಡ ವಸೂಲಿ ಮಾಡಿದೆ.ಹೆಚ್‌‍ಡಿಎಫ್‍ಸಿ ವಸೂಲಿ ಮಾಡಿದ ದಂಡ ₹590 ಕೋಟಿ.ಇದೇ ಅವಧಿಯಲ್ಲಿ ಮೂರು ಖಾಸಗಿ ಬ್ಯಾಂಕುಗಳು ವಸೂಲಿ ಮಾಡಿದ ಮೊತ್ತ21 ಸಾರ್ವಜನಿಕ ಬ್ಯಾಂಕ್‍ಗಳು ವಸೂಲಿ ಮಾಡಿದ ಮೊತ್ತದ ಶೇ.40ರಷ್ಟಿದೆ ಎಂದು ದಿ ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ.

ಬ್ಯಾಂಕ್‍ಗಳು ನೀಡುವ ಸೇವೆಗಳಿಗೆ ಶುಲ್ಕಗಳನ್ನು ನಿರ್ಧರಿಸಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿತ್ತು.ಬ್ಯಾಂಕ್ ನೀತಿ ಮತ್ತು ನೀಡುವ ಸೇವೆಗಳ ಶುಲ್ಕವು ಅನುಪಾತದಲ್ಲಿರಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿತ್ತು.
ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದೇ ಇದ್ದರೆ ಎಸ್‍ಬಿಐ ಗ್ರಾಹಕರಿಂದ ವಸೂಲಿ ಮಾಡುವ ದಂಡ ₹5ರಿಂದ ₹15 ಆಗಿದೆ.ಮೆಟ್ರೊ ನಗರಗಳಲ್ಲಿ ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಸರಾಸರಿ ₹3,000 ಇಲ್ಲದೇ ಇದ್ದರೆ ದಂಡ ವಸೂಲಿ ಮಾಡಲಾಗುತ್ತದೆ.ನಗರ ಪ್ರದೇಶಗಳಲ್ಲಿ ಕನಿಷ್ಠ ಮೊತ್ತ ₹2,000 ಮತ್ತು ಗ್ರಾಮ ಪ್ರದೇಶಗಳಲ್ಲಿ 1,000 ಆಗಿದೆ.
ಹೆಚ್‍ಡಿಎಫ್‍ಸಿ ಬ್ಯಾಂಕ್ ಮೂರು ತಿಂಗಳ ಕಾಲವಧಿಯಲ್ಲಿ ವಸೂಲಿ ಮಾಡುವ ಮೊತ್ತ ₹150ರಿಂದ ₹600 ಆಗಿದೆ. ಖಾತೆಯಲ್ಲಿರಬೇಕಾದ ಸರಾಸರಿ ಮೊತ್ತ ₹2,500ರಿಂದ ₹10,000 ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.