ADVERTISEMENT

ಬಿಇಎಂಎಲ್‌: ಮುಂಬೈ ಮೆಟ್ರೊ ಬೋಗಿ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:25 IST
Last Updated 29 ಜುಲೈ 2019, 20:25 IST
ಬೋಗಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ಡಿ. ಎಸ್‌. ಮಿಶ್ರಾ, ‘ಎಂಎಂಆರ್‌ಡಿಎ’ನ ಕಮಿಷನರ್‌ ಆರ್‌. ಎ. ರಾಜೀವ್‌, ದೆಹಲಿ ಮೆಟ್ರೊದ ವ್ಯವಸ್ಥಾಪಕ ನಿರ್ದೇಶಕ ಎಂ. ಸಿಂಗ್‌, ಬೆಂಗಳೂರು ಮೆಟ್ರೊದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅವರು ಉಪಸ್ಥಿತರಿದ್ದರು.

ಬೆಂಗಳೂರು: ರಕ್ಷಣಾ ಇಲಾಖೆಯ ಮಿನಿರತ್ನ ಕಂಪನಿಯಾಗಿರುವ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್‌) ತನ್ನ ಬೆಂಗಳೂರು ತಯಾರಿಕಾ ಘಟಕದಲ್ಲಿ ಮುಂಬೈನ ಮೆಟ್ರೊ (ಎಂಎಂಆರ್‌ಡಿಎ) ಯೋಜನೆಗೆ ಬೋಗಿಗಳನ್ನು ತಯಾರಿಸುವುದಕ್ಕೆ ಚಾಲನೆ ನೀಡಿದೆ.

‘ನಿಗದಿತ ಕಾಲಮಿತಿ ಒಳಗೆ ‘ಎಂಎಂಆರ್‌ಡಿಎ’ಗೆ ಬೋಗಿಗಳನ್ನು ಪೂರೈಸಲು ಬಿಇಎಂಎಲ್‌ ಬದ್ಧವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ಕುಮಾರ್‌ ಹೋಟಾ ಹೇಳಿದ್ದಾರೆ.

ಬಿಇಎಂಎಲ್‌, ಈ ಮೊದಲೇ ‘ಎಂಎಂಆರ್‌ಡಿಎ’ನ ಕಾರಿಡಾರ್‌ 2 ಮತ್ತು 7ಕ್ಕೆ 378 ಮೆಟ್ರೊ ಬೋಗಿಗಳನ್ನು ಪೂರೈಸುವ ₹ 3,015 ಕೋಟಿಯ ಗುತ್ತಿಗೆಯನ್ನು ಪಡೆದುಕೊಂಡಿದೆ.

ADVERTISEMENT

‘ಪ್ರತಿಯೊಂದು ಬೋಗಿಯು 300 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿರಲಿದೆ’ ಎಂದು ಹೋಟಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.