ನಮ್ಮ ಮೆಟ್ರೊ
ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) 42 ಹೊಸ ಬೋಗಿಗಳನ್ನು ಪೂರೈಸಲು ಹೆಚ್ಚುವರಿಯಾಗಿ ₹405 ಕೋಟಿ ಮೊತ್ತದ ಆರ್ಡರ್ ಪಡೆಯಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಶುಕ್ರವಾರ ತಿಳಿಸಿದೆ.
ಬಿಎಂಆರ್‌ಸಿಎಲ್‌ಗೆ ಒಟ್ಟು 7 ರೈಲುಗಳನ್ನು ಪೂರೈಸಲಾಗುವುದು. ಪ್ರತಿ ರೈಲು 6 ಬೋಗಿಗಳನ್ನು ಒಳಗೊಂಡಿದ್ದು, ಮೆಟ್ರೊ ರೈಲುಗಳ ಸಂಖ್ಯೆ 53ರಿಂದ 60ಕ್ಕೆ ಹೆಚ್ಚಲಿದೆ ಎಂದು ಹೇಳಿದೆ.
ಬೋಗಿಗಳ ವಿನ್ಯಾಸವನ್ನು ಬಿಇಎಂಎಲ್‌ನ ಎಂಜಿನಿಯರಿಂಗ್ ವಿಭಾಗವೇ ಮಾಡಲಿದೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.