ADVERTISEMENT

ಸೆನ್ಸೆಕ್ಸ್ ಅಲ್ಪ ಕುಸಿತ

ಪಿಟಿಐ
Published 3 ಜೂನ್ 2021, 5:08 IST
Last Updated 3 ಜೂನ್ 2021, 5:08 IST

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 85 ಅಂಶ ಇಳಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 1.35 ಅಂಶದಷ್ಟು ಅತ್ಯಲ್ಪ ಏರಿಕೆ ಕಂಡಿತು.

2019–20ರ ಮಾರ್ಚ್‌ ತ್ರೈಮಾಸಿಕಕ್ಕಿಂತ 2020–21ರ ಮಾರ್ಚ್ ತ್ರೈಮಾಸಿಕದಲ್ಲಿ ಕಡಿಮೆ ಲಾಭ ಕಂಡಿರುವ ಐಟಿಸಿ ಕಂಪನಿಯ ಷೇರುಗಳು ತೀವ್ರ ಕುಸಿತ ಕಂಡವು. ಟೆಕ್ ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್, ಟಿಸಿಎಸ್, ಎಚ್‌ಸಿಎಲ್‌ ಟೆಕ್ನಾಲಜೀಸ್, ಎಚ್‌ಡಿಎಫ್‌ಸಿ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಏರಿಕೆ ದಾಖಲಿಸಿದವು.

ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಆಟೊ ಮತ್ತು ಮಾರುತಿ ಷೇರುಗಳು ಏರಿಕೆ ಕಂಡವು. ‘ಖಾಸಗಿಯವರಿಗೆ ಮಾರಾಟ ಆಗಲಿರುವ ಬ್ಯಾಂಕ್‌ಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಶೀಘ್ರವೇ ಅಂತಿಮಗೊಳಿಸಲಿದೆ ಎಂಬ ನಿರೀಕ್ಷೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರುಗಳ ಖರೀದಿ ಜೋರಾಗಿತ್ತು. ಆರ್‌ಬಿಐ ತನ್ನ ಹಣಕಾಸು ನೀತಿಯಲ್ಲಿ, ಆರ್ಥಿಕ ಬೆಳವಣಿಗೆಯ ಮೇಲೆ ಗಮನ ನೀಡುವ ನಿರೀಕ್ಷೆ ಇದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇಕಡ 0.98ರಷ್ಟು ಜಾಸ್ತಿಯಾಗಿ, ಬ್ಯಾರೆಲ್‌ಗೆ 70.94 ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.