ಬ್ಲಿಂಕಿಟ್
ಚಿತ್ರಕೃಪೆ: @letsblinkit
ನವದೆಹಲಿ: ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಆಯ್ದ ನಗರಗಳಲ್ಲಿ 10 ನಿಮಿಷಗಳಲ್ಲಿ ಡೆಲಿವರಿ ಮಾಡುವುದಾಗಿ ಕ್ವಿಕ್ ಕಾಮರ್ಸ್ ಕಂಪನಿ ಬ್ಲಿಂಕಿಟ್‌ನ ಸಂಸ್ಥಾಪಕ ಮತ್ತು ಸಿಇಒ ಅಲ್ಬಿಂದರ್ ಧಿಂಡ್ಸಾಸಾ ಗುರುವಾರ ಹೇಳಿದ್ದಾರೆ.
ಮ್ಯಾಕ್‌ಬುಕ್, ಐಪ್ಯಾಡ್, ಇಯರ್‌ಪಾಡ್ಸ್, ಆ್ಯಪಲ್ ವಾಚ್ ಸೇರಿದಂತೆ ಇತರ ಹಲವು ಆ್ಯಪಲ್ ಉತ್ಪನ್ನಗಳು ಆರ್ಡರ್ ಮಾಡಿದ 10 ನಿಮಿಷಗಳಲ್ಲಿ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ಧಿಂಡ್ಸಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು, ದೆಹಲಿ ಎನ್‌ಸಿಆರ್, ಮುಂಬೈ, ಹೈದರಾಬಾದ್, ಪುಣೆ, ಲಖನೌ, ಅಹಮದಾಬಾದ್, ಚಂಡೀಗಢ, ಚೆನ್ನೈ, ಜೈಪುರ ಮತ್ತು ಕೋಲ್ಕತ್ತ ನಗರಗಳಲ್ಲಿ ಸದ್ಯ ಈ ಸೇವೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.