ADVERTISEMENT

ಒಂದು ವರ್ಷದಲ್ಲಿ 60ಕ್ಕೂ ಅಧಿಕ ಎಸ್ಎಂಇಗಳ ಐಪಿಒ: ಅಜಯ್‌ ಠಾಕೂರ್

ಬಿಎಸ್‌ಇ ಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್‌ ವಿಭಾಗದ ಮುಖ್ಯಸ್ಥ

ಪಿಟಿಐ
Published 26 ಮೇ 2021, 16:13 IST
Last Updated 26 ಮೇ 2021, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಒಂದು ವರ್ಷದಲ್ಲಿ 60ಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಸ್‌ಎಂಇ) ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲಿವೆ ಎಂದು ಬಿಎಸ್‌ಇ ಎಸ್‌ಎಂಇ ಮತ್ತು ನವೋದ್ಯಮ ವಿಭಾಗದ ಮುಖ್ಯಸ್ಥ ಅಜಯ್‌ ಠಾಕೂರ್ ಬುಧವಾರ ತಿಳಿಸಿದ್ದಾರೆ.

ಕಳೆದ ವರ್ಷ 15 ಎಸ್‌ಎಂಇಗಳು ಐಪಿಒ ಮೂಲಕ ₹ 100 ಕೋಟಿ ಬಂಡವಾಳ ಸಂಗ್ರಹಿಸಿದ್ದವು.

ಎಸ್‌ಎಂಇ ಷೇರುಗಳಲ್ಲಿ ಹೂಡಿಕೆ ಮಾಡುವುದನ್ನು ಉತ್ತೇಜಿಸಲು ವೆಬಿನಾರ್‌ಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರಗಳು ಮತ್ತು ಇತರ ವೃತ್ತಿಪರ ಸಂಘ–ಸಂಸ್ಥೆಗಳೊಂದಿಗೆ ಸಹಯೋಗವನ್ನೂ ಹೊಂದಲಾಗುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.

ADVERTISEMENT

ಎಸ್‌ಎಂಇಗಳಿಗೆ ಷೇರುಪೇಟೆಯ ಕುರಿತು ಜಾಗೃತಿ ಮೂಡಿಸಲು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ 150ಕ್ಕೂ ಹೆಚ್ಚಿನ ವೆಬಿನಾರ್‌ಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಷೇರುಪೇಟೆಯಲ್ಲಿ ನೋಂದಣಿ ಆಗುವುದರಿಂದ ಎಸ್‌ಎಂಇಗಳ ಬ್ರ್ಯಾಂಡ್‌ ಅಭಿವೃದ್ಧಿಗೆ ನೆರವಾಗಲಿದೆ. ಕ್ರೆಡಿಟ್‌ ರೇಟಿಂಗ್ ಸುಧಾರಿಸಲಿದೆ, ಸುಲಭವಾಗಿ ಹಣಕಾಸಿನ ನೆರವು ಸಿಗಲಿದೆ. ಬೆಳವಣಿಗೆಗೂ ಅವಕಾಶ ಸಿಗಲಿದೆ ಎಂದು ಅವರು ವಿವರಿಸಿದ್ದಾರೆ.

ಅಂಕಿ–ಅಂಶ

337: ಈಗಾಗಲೇ ನೋಂದಣಿ ಆಗಿರುವ ಎಸ್‌ಎಂಇಗಳು

63: ಒಂದು ವರ್ಷದಲ್ಲಿ ನೋಂದಣಿ ಆಗಲಿರುವ ಎಸ್‌ಎಂಇಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.