ADVERTISEMENT

ಬ್ರೋಕರೇಜ್‌ ಮಾತು: ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಶೂರೆನ್ಸ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 23:30 IST
Last Updated 14 ಜನವರಿ 2026, 23:30 IST
   

ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಶೂರೆನ್ಸ್‌ ಕಂಪನಿಯ ಷೇರಿನ ಬೆಲೆ ₹180 ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ವಿಮಾ ಉದ್ಯಮದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್‌) ಶೇ 12ರಷ್ಟಿದೆ. ಕಂಪನಿಯ ಮಾರುಕಟ್ಟೆ ಪಾಲು ಶೇ 9ರಿಂದ ಶೇ 12ರಷ್ಟು ಇದೆ. ವಿಮಾ ಉತ್ಪನ್ನಗಳಲ್ಲಿನ ವೈವಿಧ್ಯ ಇದಕ್ಕೆ ನೆರವಾಗಿದೆ.

ಕೆನರಾ ಬ್ಯಾಂಕ್‌ 12 ಕೋಟಿ ಗ್ರಾಹಕರನ್ನು ಹೊಂದಿದ್ದು, ಕೇವಲ ಶೇ 1.7ರಷ್ಟು ಗ್ರಾಹಕರಿಗೆ ಮಾತ್ರ ವಿಮೆ ಮಾರಾಟ ಮಾಡಿದೆ. ಪ್ರತಿ ಬ್ಯಾಂಕ್‌ ಶಾಖೆಗಳಲ್ಲಿ ವಿಮೆ ವಿಚಾರದಲ್ಲಿ ಉತ್ಪಾದಕತೆ ಕಡಿಮೆ ಇದೆ. ಇವೆಲ್ಲ ವಹಿವಾಟಿನ ಬೆಳವಣಿಗೆಗೆ ಸುದೀರ್ಘ ಅವಕಾಶ ಕಲ್ಪಿಸುತ್ತಿವೆ ಎಂದು ಮೋತಿಲಾಲ್ ಓಸ್ವಾಲ್ ವಿವರಿಸಿದೆ. 2024–25ರಿಂದ 2027–28ರ ಆರ್ಥಿಕ ವರ್ಷದವರೆಗೆ ಹೊಸ ವ್ಯಾಪಾರದ ಮೌಲ್ಯದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್‌) ಶೇ 23ರಷ್ಟಿರುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಶೂರೆನ್ಸ್‌ ಷೇರಿನ ಬೆಲೆ ₹142.40 ಆಗಿತ್ತು.

ADVERTISEMENT

(ಬ್ರೋಕರೇಜ್‌ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.