ADVERTISEMENT

ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

ಪಿಟಿಐ
Published 29 ಸೆಪ್ಟೆಂಬರ್ 2023, 13:48 IST
Last Updated 29 ಸೆಪ್ಟೆಂಬರ್ 2023, 13:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023–24ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ವಾರ್ಷಿಕ ಬಜೆಟ್‌ ಅಂದಾಜಿನ ಶೇ 36ರಷ್ಟು ಆಗಿದೆ.

2022–23ರ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್‌ ಅಂದಾಜಿನ ಶೇ 32.6ರಷ್ಟು ಇತ್ತು ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

ಮೌಲ್ಯದ ಲೆಕ್ಕದಲ್ಲಿ ವಿತ್ತೀಯ ಕೊರತೆಯು ಆಗಸ್ಟ್‌ ತಿಂಗಳ ಅಂತ್ಯಕ್ಕೆ ₹6.42 ಲಕ್ಷ ಕೋಟಿಯಷ್ಟು ಆಗಿದೆ. ವರಮಾನ ಮತ್ತು ವೆಚ್ಚದ ನಡುವಣ ಅಂತರವೇ ವಿತ್ತೀಯ ಕೊರತೆ.

ADVERTISEMENT

2023–24ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2022–23ರಲ್ಲಿ ವಿತ್ತೀಯ ಕೊರತೆಯು ಶೇ 6.4ರಷ್ಟು ಇತ್ತು.

ನಿವ್ವಳ ತೆರಿಗೆ ವರಮಾನವು 2023–24ರ ಏಪ್ರಿಲ್‌–ಆಗಸ್ಟ್‌ ಅವಧಿಗೆ ₹8.03 ಲಕ್ಷ ಕೋಟಿ ಆಗಿದೆ. ಬಜೆಟ್‌ ಅಂದಾಜಿನ ಶೇ 34.5ರಷ್ಟು. 2022–23ರ ಆಗಸ್ಟ್‌ ಅಂತ್ಯದಲ್ಲಿ ಶೇ 36.2ರಷ್ಟು ಆಗಿತ್ತು.

ಕೇಂದ್ರದ ಒಟ್ಟು ವೆಚ್ಚವು ಬಜೆಟ್‌ ಅಂದಾಜಿನ ಶೇ 37.1ರಷ್ಟು (₹16.71 ಲಕ್ಷ ಕೋಟಿ) ಆಗಿದೆ. ಹಿಂದಿನ ಅವಧಿಯಲ್ಲಿ ಶೇ 35.2ರಷ್ಟು ಇತ್ತು ಎಂದು ಸಿಜಿಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.