
ಬೆಂಗಳೂರು: ಜಾಗತಿಕ ಟ್ರಾವೆಲ್ ಕಂಪನಿಯಾದ ಓಯೊ, ಕ್ರಿಕೆಟ್ ಅಭಿಮಾನಿಗಳಿಗಾಗಿ ನಗರದಲ್ಲಿ ‘ಕ್ರಿಕೋಟೆಲ್’ ಎಂಬ ಕ್ರಿಕೆಟ್ ಥೀಮ್‌ನ ಹೋಟೆಲ್ ಆರಂಭಿಸಿದೆ.
ಬಿಲೇಕಹಳ್ಳಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬಳಿ ಇರುವ ಈ ಕ್ರಿಕೋಟೆಲ್‌ನಲ್ಲಿ 15 ಕೊಠಡಿಗಳಿದ್ದು, ಪ್ರತಿ ಕೋಣೆಯನ್ನು ಭಾರತದ ಶ್ರೇಷ್ಠ ಗೆಲುವಿಗೆ ಅರ್ಪಿಸಿದೆ.
ಹೋಟೆಲ್‌ನಲ್ಲಿ ಸ್ಟೇಡಿಯಂ ರೀತಿಯ ಸೆಂಟ್ರಲ್ ಹಾಲ್, ಕ್ರಿಕೆಟ್ ದಿಗ್ಗಜರಿಗೆ ಮೀಸಲಾದ ಗೋಡೆ, ಕ್ರಿಕೆಟ್ ಸ್ಮರಣಿಕೆಗಳು, ಪೋಸ್ಟರ್‌ಗಳು, ಪಿಚ್ ಮಾದರಿಯ ಹಜಾರ ಸೇರಿ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಕ್ರೀಡೆಯ ಪಾರಂಪರಿಕ ಅನುಭವ ಮತ್ತು ಕ್ರಿಕೆಟ್ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಿದೆ.
ಸ್ನೇಹಿತರು ಮತ್ತು ಕುಟುಂಬದೊಂದಿಗೆ ಒಟ್ಟಿಗೆ ಪಂದ್ಯಗಳನ್ನು ವೀಕ್ಷಿಸುವವರಿಗೆ ವಿಶೇಷ ಪ್ಯಾಕೇಜ್ ಸಹ ಇದೆ. ಓಯೊ ಹೋಟೆಲ್ ಆ್ಯಪ್ ಮೂಲಕ ಗ್ರಾಹಕರು ತಮಗೆ ಬೇಕಾದ ಕೊಠಡಿಗಳನ್ನು ಬುಕ್ ಮಾಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಕ್ರಿಕೋಟೆಲ್ ಕ್ರಿಕೆಟ್ ಅಭಿಮಾನಿಗಳಿಗೆ ಮೀಸಲಾದ ಸ್ಥಳ. ಇಲ್ಲಿ ಕ್ರೀಡೆಯ ಉತ್ಸಾಹವನ್ನು ಪ್ರತಿಬಿಂಬಿಸುವ ವಾತಾವರಣ ಇದೆ. ನಮ್ಮ ಆತಿಥ್ಯ ಮತ್ತು ಅನುಕೂಲತೆಗಳನ್ನು ಪಡೆಯುತ್ತಾ ಕ್ರಿಕೆಟ್ ಅನ್ನು ಸಂಭ್ರಮಿಸಬಹುದಾಗಿದೆ ಎಂದು ಸ್ಟ್ರ್ಯಾಟೆಜಿಕ್ ಅಲಯನ್ಸಸ್ ಮತ್ತು ಕಮ್ಯುನಿಕೇಷನ್‌ನ ಜಾಗತಿಕ ಮುಖ್ಯಸ್ಥ ನಿತಿನ್ ಠಾಕೂರ್ ತಿಳಿಸಿದ್ದಾರೆ.
‘ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ದೇಶದಾದ್ಯಂತ ಲಕ್ಷಾಂತರ ಜನರನ್ನು ಒಂದುಗೂಡಿಸುವ ಸಂಭ್ರಮವಾಗಿದೆ. ಕ್ರಿಕೋಟೆಲ್ ಮೂಲಕ ಕ್ರಿಕೆಟ್ ಪ್ರೇಮಿಗಳಿಗಾಗಿ ಸ್ವರ್ಗವೊಂದನ್ನು ಸೃಷ್ಟಿಸುವ ಗುರಿ ನಮ್ಮದು’ ಎಂದು ಕ್ರಿಕೋಟೆಲ್ ಮಾಲೀಕ ಕೆ.ಎಂ. ಹನೀಫ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.