ನವದೆಹಲಿ:ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿವೆ. ಪೆಟ್ರೋಲ್ ದರದಲ್ಲಿ ಇಳಿಕೆ ಮಾಡುತ್ತಿರುವುದು ಆರು ತಿಂಗಳಲ್ಲಿ ಇದು ಎರಡನೇ ಬಾರಿಯಾಗಿದೆ.
ದೆಹಲಿಯಲ್ಲಿ ಡೀಸೆಲ್ ಪೆಟ್ರೋಲ್ ದರ 12 ಪೈಸೆ ಇಳಿಕೆಯಾಗಿ ₹ 72.93ರಂತೆ ಮಾರಾಟವಾಯಿತು. ಪೆಟ್ರೋಲ್ ದರ 13 ಪೈಸೆ ಕಡಿಮೆಯಾಗಿ ₹ 81.86ಕ್ಕೆ ತಲುಪಿತು. ಸೆ. 3ರಿಂದ 12ರವರೆಗಿನ ಅವಧಿಯಲ್ಲಿ ಡೀಸೆಲ್ ದರ ಒಂದು ಲೀಟರಿಗೆ 63 ಪೈಸೆ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 14 ಪೈಸೆ ಕಡಿಮೆ ಆಗಿದ್ದು, 84.52ರಂತೆ ಹಾಗೂ ಡೀಸೆಲ್ ದರ 12 ಪೈಸೆ ಕಡಿಮೆಯಾಗಿ ₹ 77.22ರಂತೆ ಮಾರಾಟವಾಗಿದೆ.
ದೇಶದಾದ್ಯಂತ ಜೂನ್ 7 ರಿಂದ ಜುಲೈ 25ರವರೆಗಿನ ಅವಧಿಯಲ್ಲಿ ಡೀಸೆಲ್ ದರ ಪ್ರತಿ ಲೀಟರಿಗೆ ₹ 12.55 ರಷ್ಟು ಏರಿಕೆ ಮಾಡಲಾಗಿತ್ತು. ಪೆಟ್ರೋಲ್ ದರ ಜೂನ್ 7 ರಿಂದ ಜೂನ್ 29ರ ಅವಧಿಯಲ್ಲಿ ಲೀಟರಿಗೆ ₹ 9.17ರಷ್ಟು ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.