ADVERTISEMENT

ಡೀಸೆಲ್‌ ಬೆಲೆ: ದಾಖಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 15:40 IST
Last Updated 22 ಜೂನ್ 2020, 15:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ : ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳವು ಸತತ 16ನೇ ದಿನವೂ ಮುಂದುವರೆದಿದ್ದು ಸೋಮವಾರ ಕ್ರಮವಾಗಿ 33 ಪೈಸೆ ಮತ್ತು 58 ಪೈಸೆಗಳಂತೆ ಏರಿಕೆ ಮಾಡಲಾಗಿದೆ.

ನಿರಂತರ ಹೆಚ್ಚಳದ ಫಲವಾಗಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ ₹ 9.46ರಷ್ಟು ಮತ್ತು ಪೆಟ್ರೋಲ್‌ ಬೆಲೆ ₹ 8.30ರಷ್ಟು ತುಟ್ಟಿಯಾಗಿದೆ. ಬೆಂಗಳೂರಿನಲ್ಲಿ ಈಗ ಡೀಸೆಲ್ ಬೆಲೆ ₹ 75.04 ಮತ್ತು ಪೆಟ್ರೋಲ್‌ ಬೆಲೆ₹ 82.12 ಕ್ಕೆ ತಲುಪಿದೆ.

2002ರಲ್ಲಿ ಇಂಧನ ಬೆಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ ನಂತರ ಬೆಲೆ ಏರಿಕೆಯು ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. 2017ರ ಮೇನಿಂದ ಪ್ರತಿ ದಿನ ದರ ಪರಿಷ್ಕರಿಸಲಾಗುತ್ತಿದೆ.

ADVERTISEMENT

ಡೀಸೆಲ್‌ ಈಗ ದೇಶದಾದ್ಯಂತ ಪ್ರತಿ ಲೀಟರ್‌ಗೆ ₹ 75 ರಿಂದ ₹ 79ರ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಲಿದೆ. ಬೇಳೆಕಾಳು, ಸಕ್ಕರೆ, ಹಾಲು, ಅಕ್ಕಿ ಮತ್ತು ಗೋಧಿ ಬೆಲೆ ತಕ್ಷಣಕ್ಕೆ ಏರಿಕೆಯಾಗಲಿವೆ. ಮುಂಬರುವ ದಿನಗಳಲ್ಲಿ ಸೋಪ್‌, ಶಾಂಪು, ಬಿಸ್ಕಿಟ್‌ ದುಬಾರಿಯಾಗಲಿವೆ ಎಂದು ಪರಿಣತರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.