ನವದೆಹಲಿ: ‘ದೂರಸಂಪರ್ಕ ಇಲಾಖೆಯ ‘ಸಂಚಾರ್ ಸಾಥಿ’ ಪೋರ್ಟಲ್ ನೆರವಿನಿಂದ ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವಾಲಯದ ರಾಜ್ಯ ಸಚಿವ ಚಂದ್ರ ಶೇಖರ್ ಪೆಮ್ಮಸಾನಿ ಹೇಳಿದ್ದಾರೆ.
ಪೋರ್ಟಲ್ ಸಹಾಯದಿಂದ ಇಲ್ಲಿಯವರೆಗೆ 33.5 ಲಕ್ಷ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದುಹೋದ ಮೊಬೈಲ್ ಫೋನ್‌ಗಳ ಸರಾಸರಿ ಮರಳಿ ಸಂಗ್ರಹಿಸಿದ ಪ್ರಮಾಣ ಶೇ 22.9ರಷ್ಟಿದೆ. ಇಲ್ಲಿಯವರೆಗೆ 4.64 ಲಕ್ಷ ಫೋನ್‌ಗಳನ್ನು ಸಾರ್ವಜನಿಕರಿಗೆ ಹಿಂತಿರುಗಿಸಲಾಗಿದೆ ಎಂದರು. ಸುರಕ್ಷಿತ ಮತ್ತು ನಾಗರಿಕ ಕೇಂದ್ರಿತವಾದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರ ಬದ್ಧವಿದೆ ಎಂದು ಹೇಳಿದರು.
ಸಂಚಾರ ಸಾಥಿ ಪೋರ್ಟಲ್, ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲು ಮತ್ತು ಪತ್ತೆ ಹಚ್ಚಲು ಸಾರ್ವಜನಿಕರಿಗೆ ನೆರವು ನೀಡುತ್ತದೆ. ವಂಚನೆಯ ಕರೆಗಳ ವಿರುದ್ಧ ದೂರು ಸಲ್ಲಿಸಲು ಮತ್ತು ವ್ಯಕ್ತಿಗಳ ಹೆಸರಿನಲ್ಲಿ ನೀಡಲಾದ ನಕಲಿ ಸಂಪರ್ಕಗಳನ್ನು ಪತ್ತೆ ಹಚ್ಚುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.