ADVERTISEMENT

ಚಂದಾ ಕೊಚ್ಚಾರ್‌ಗೆ ಸೇರಿದ ₹ 78 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಸಾಲ ಹಗರಣ

ಏಜೆನ್ಸೀಸ್
Published 10 ಜನವರಿ 2020, 12:37 IST
Last Updated 10 ಜನವರಿ 2020, 12:37 IST
   

ಮುಂಬೈ:ಐಸಿಐಸಿಐ ಬ್ಯಾಂಕ್‌ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಅವರಿಗೆ ಸೇರಿದ ₹ 78 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಸಾಲ ಹಗರಣಕ್ಕೆ ಸಂಬಂಧಿಸಿ ಇ.ಡಿ. ಈ ಕ್ರಮ ಕೈಗೊಂಡಿದೆ.

ಚಂದಾ ಕೊಚ್ಚಾರ್ ಅವರಿಗೆ ಸೇರಿದ ಮುಂಬೈ ಫ್ಲ್ಯಾಟ್, ಅವರ ಪತಿ ದೀಪಕ್‌ ಕಂಪನಿಯ ಆಸ್ತಿ ಸೇರಿದಂತೆ ಒಟ್ಟು₹ 78 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದುಎಎನ್‌ಐವರದಿ ಮಾಡಿದೆ.

2012ರ ವಿಡಿಯೊಕಾನ್ ಸಾಲ ಹಗರಣ ಸಂಬಂಧ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಸೇರಿದಂತೆ ಮೂವರ ವಿರುದ್ಧ ಇತ್ತೀಚೆಗಷ್ಟೆ ಸಿಬಿಐ ಕೂಡ ಎಫ್‌ಐಆರ್ ದಾಖಲಿಸಿತ್ತು.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.