ADVERTISEMENT

ರೆಪೊ ದರ ಏರಿಕೆ ಪರಿಣಾಮ: ಆಟೊ, ಗೃಹ ಸಾಲ ಇಎಂಐ ಹೆಚ್ಚಳ ಸಾಧ್ಯತೆ

ಪಿಟಿಐ
Published 4 ಮೇ 2022, 12:33 IST
Last Updated 4 ಮೇ 2022, 12:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಹೆಚ್ಚಳ ಮಾಡಿರುವುದರಿಂದ ಆಟೊ, ಗೃಹ ಸೇರಿದಂತೆ ಇತರ ಸಾಲಗಳ ಇಎಂಐ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ಬುಧವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೊ ದರದಲ್ಲಿ ಶೇ 0.4ರಷ್ಟು ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ರೆಪೊ ದರ ಶೇ 4.40ಕ್ಕೆ ಏರಿಕೆಯಾಗಿದೆ. ಜತೆಗೆ ನಗದು ಮೀಸಲು ಅನುಪಾತವನ್ನೂ (ಕ್ಯಾಶ್ ರಿಸರ್ವ್ ರೇಷಿಯೊ) ಬೇಡಿಕೆಯ 50 ಮೂಲಾಂಶ ಹೆಚ್ಚಿಸಲಾಗಿದ್ದು, ಶೇ 4.5ಕ್ಕೆ ನಿಗದಿಪಡಿಸಲಾಗಿದೆ.

ADVERTISEMENT

ಕುಸಿದ ಷೇರುಪೇಟೆ: ರೆಪೊ ದರ ಹೆಚ್ಚಳದ ಪರಿಣಾಮವಾಗಿ ಷೇರುಪೇಟೆಯಲ್ಲಿ ವಹಿವಾಟು ಕುಸಿತ ಕಂಡಿದೆ. ಹೂಡಿಕೆದಾರರಿಗೆ ₹6.27 ಲಕ್ಷ ಕೋಟಿ ನಷ್ಟವಾಗಿದೆ.

ಈ ಮಧ್ಯೆ, ರೆಪೊ ದರವನ್ನು ಹೆಚ್ಚಳ ಮಾಡಿರುವುದರಿಂದ ಸಣ್ಣ ಹೂಡಿಕೆದಾರರು ಹಾಗೂ ಉಳಿತಾಯ ಮನೋಭಾವದವರಿಗೆ ಒಂದಿಷ್ಟು ‍ಪ್ರಯೋಜನ ಸಿಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.