ADVERTISEMENT

ಇಪಿಎಸ್: ಇಬ್ಬರಲ್ಲಿ ಒಬ್ಬರಿಗೆ ₹1,500ಕ್ಕಿಂತ ಕಡಿಮೆ ಪಿಂಚಣಿ

ಪಿಟಿಐ
Published 21 ಆಗಸ್ಟ್ 2025, 15:34 IST
Last Updated 21 ಆಗಸ್ಟ್ 2025, 15:34 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ 1995ರ ಅಡಿ (ಇಪಿಎಸ್‌–95) ಪ್ರತಿ ಇಬ್ಬರು ಪಿಂಚಣಿದಾರರ ಪೈಕಿ ಒಬ್ಬರು ಮಾಸಿಕ ₹1,500ಕ್ಕಿಂತಲೂ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಗುರುವಾರ ತಿಳಿಸಿದೆ.‌

ಈ ವರ್ಷದ ಮಾರ್ಚ್ 31ರ ವೇಳೆಗೆ ಇಪಿಎಸ್‌–95 ಯೋಜನೆಯಲ್ಲಿ ಒಟ್ಟು 81,48,490 ಪಿಂಚಣಿದಾರರು ಇದ್ದಾರೆ. ಈ ಪೈಕಿ 49,15,416 ಪಿಂಚಣಿದಾರರು ₹1,500ಕ್ಕಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. 

53,541 ಪಿಂಚಣಿದಾರರಿಗೆ ಮಾತ್ರ ಮಾಸಿಕ ₹6 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ದೊರೆಯುತ್ತಿದೆ. ಇವರ ಪ್ರಮಾಣವು ಒಟ್ಟು ಪಿಂಚಣಿದಾರರಲ್ಲಿ ಶೇ 0.65ರಷ್ಟಿದೆ. 78,69,560 ಪಿಂಚಣಿದಾರರು ₹4 ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಸ್ವೀಕರಿಸಿದ್ದಾರೆ. ಪ್ರಸ್ತುತ ಈ ಯೋಜನೆಯಡಿ ಮಾಸಿಕ ಕನಿಷ್ಠ ಪಿಂಚಣಿ ₹1 ಸಾವಿರ ಆಗಿದೆ. 

ADVERTISEMENT

2022–23ರ ಆರ್ಥಿಕ ವರ್ಷದಲ್ಲಿ ₹22,112 ಕೋಟಿ ಪಿಂಚಣಿ ವಿತರಿಸಲಾಗಿತ್ತು. 2023–24ರಲ್ಲಿ ಇದು ₹23,027 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.