ADVERTISEMENT

ಪೇಟೆಯಲ್ಲಿ ಗೂಳಿ ನೆಗೆತ: 5 ದಿನಗಳಲ್ಲಿ ಹೂಡಿಕೆದಾರ ಹಣ ₹15.18 ಲಕ್ಷ ಕೋಟಿ ಹೆಚ್ಚಳ

ಪಿಟಿಐ
Published 5 ಡಿಸೆಂಬರ್ 2024, 12:57 IST
Last Updated 5 ಡಿಸೆಂಬರ್ 2024, 12:57 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ನವದೆಹಲಿ: ಸೆನ್ಸೆಕ್ಸ್‌ ಶೇ 3.44ರಷ್ಟು ಹೆಚ್ಚಳವಾಗಿದ್ದು, ಈಕ್ವಿಟಿಯಲ್ಲಿ ಹೂಡಿಕೆ ಮಾಡಿದವರ ಹಣ ಕಳೆದ ಐದು ದಿನಗಳಲ್ಲಿ ₹ 15.18 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ. 

ಕಳೆದ ಐದು ದಿನಗಳಲ್ಲಿ ಬಿಎಸ್‌ಇ ಸೂಚ್ಯಂಕವು 2,722.12ರಷ್ಟು ಹೆಚ್ಚಳವಾಗಿದೆ. ಗುರುವಾರವೂ ಷೇರುಪೇಟೆಯಲ್ಲಿ ಗೂಳಿಯ ನೆಗೆತ ಕಂಡುಬಂತು. ಇದರಿಂದಾಗಿ 809.53ರಷ್ಟು ಅಂಶ (ಶೇ 1ರಷ್ಟು) ಹೆಚ್ಚಳವಾಯಿತು. ಇದರಿಂದಾಗಿ ದಿನದ ಅಂತ್ಯದ ಹೊತ್ತಿಗೆ ಸೂಚ್ಯಂಕವು 81,765.86 ಅಂಶಗಳಷ್ಟು ದಾಖಲಾಯಿತು. ಷೇರುಪೇಟೆ ಆರಂಭಗೊಂಡಾಗ 1,361.41ರಷ್ಟು ಅಂಶ ಹೆಚ್ಚಳವಾಗಿ ಸೂಚ್ಯಂಕವು 82,317.74ರಷ್ಟು ಅಂಶಕ್ಕೆ ತಲುಪಿತ್ತು.

ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಷೇರುಗಳ ಮೌಲ್ಯವು ₹15.18 ಕೋಟಿಯಿಂದ ₹4.58 ಕೋಟಿಗೆ ಏರಿಕೆ ಕಂಡಿತು. ಎನ್‌ಎಸ್‌ಇ ನಿಫ್ಟಿ 240.95 ಅಂಶಗಳಷ್ಟು (ಶೇ 0.98) ಏರಿಕೆ ಕಂಡಿದೆ. ಇದರಿಂದಾಗಿ ಸೂಚ್ಯಂಕವು ಗುರುವಾರ 24,708.40ರಷ್ಟು ದಾಖಲಾಯಿತು.

ADVERTISEMENT

30 ಪ್ರಮುಖ ಷೇರುಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್ಟೆನ್ಸಿ, ಇನ್ಫೊಸಿಸ್‌, ಟೈಟಾನ್‌, ಭಾರತಿ ಏರ್‌ಟೆಲ್‌, ಬಜಾಜ್ ಫೈನಾನ್ಸ್‌, ಐಸಿಐಸಿಐ ಬ್ಯಾಂಕ್‌, ಟೆಕ್ ಮಹೀಂದ್ರ ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್‌ ಷೇರುಗಳು ಹೆಚ್ಚಿನ ಲಾಭ ತಂದುಕೊಟ್ಟವು. ಏರಿಕೆಯ ಕಾಲದಲ್ಲೂ ಎನ್‌ಟಿಪಿಸಿ, ಏಷ್ಯನ್ ಪೇಂಟ್ಸ್‌ ಹಾಗೂ ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಹಿಂದೆ ಉಳಿದವು.

ಷೇರು ಪೇಟೆಯಲ್ಲಿ ಒಟ್ಟು 2,141 ಕಂಪನಿಗಳು ಲಾಭ ಕಂಡುಕೊಂಡರೆ, 1,825 ಕಂಪನಿಗಳು ನಷ್ಟ ಅನುಭವಿಸಿದವು. 117 ಕಂಪನಿಗಳು ಯಥಾಸ್ಥಿತಿ ಕಾಯ್ದುಕೊಂಡವು. ಈ ಐದು ದಿನಗಳ ಒಟ್ಟು ವಹಿವಾಟಿನಲ್ಲಿ ಐಟಿ ಮತ್ತು ದೂರಸಂಪರ್ಕ ಕ್ಷೇತ್ರ ಶೇ 1.96ರಷ್ಟು ಹೆಚ್ಚಳ ಕಂಡಿತು. ಬ್ಯಾಂಕ್‌ ಹಾಗೂ ಗ್ರಾಹಕರ ಅಗತ್ಯ ವಸ್ತುಗಳು ಶೇ 0.66ರಷ್ಟು ಹೆಚ್ಚಳ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.