ನವದೆಹಲಿ: ಕಳೆದ ವರ್ಷ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ₹4 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ.
2023ರಲ್ಲಿ ₹1.61 ಲಕ್ಷ ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಹೂಡಿಕೆ ಪ್ರಮಾಣವು ದುಪ್ಪಟ್ಟಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.
‘ಕಳೆದ ವರ್ಷ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯು ಸದೃಢವಾಗಿದೆ. ಷೇರುಪೇಟೆಯ ಇಳಿಕೆಯಿಂದಾಗಿ ಡಿಸೆಂಬರ್‌ನಿಂದ ಈಕ್ವಿಟಿ ಫಂಡ್‌ನಲ್ಲಿ ಬಂಡವಾಳ ಒಳಹರಿವು ಕಡಿಮೆಯಾಗಿದೆ. ಇದು ಪ್ರಸಕ್ತ ವರ್ಷದ ಬಂಡವಾಳ ಒಳಹರಿವಿನ ಮೇಲೂ ಪರಿಣಾಮ ಬೀರಬಹುದು’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.