ADVERTISEMENT

ಮ್ಯೂಚುವಲ್‌ ಫಂಡ್‌ ಹೂಡಿಕೆ ಹೆಚ್ಚಳ

ಪಿಟಿಐ
Published 9 ಡಿಸೆಂಬರ್ 2021, 14:09 IST
Last Updated 9 ಡಿಸೆಂಬರ್ 2021, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯ ಮೊತ್ತವು ನವೆಂಬರ್‌ನಲ್ಲಿ ₹ 11,615 ಕೋಟಿಯಷ್ಟು ಹೆಚ್ಚಳ ಆಗಿದೆ. ಷೇರು ಮಾರುಕಟ್ಟೆಯಲ್ಲಿ ಅಸ್ಥಿರತೆ ಇದ್ದರೂ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಆಗುವ ಹೂಡಿಕೆಗಳು ಹೆಚ್ಚಳ ಆಗಿದ್ದು ಇದಕ್ಕೆ ಕಾರಣ.

ಜುಲೈ ನಂತರದಲ್ಲಿ ಅಗಿರುವ ಅತಿಹೆಚ್ಚಿನ ಹೂಡಿಕೆ ಮೊತ್ತ ಇದು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ. ಈ ವರ್ಷದ ಮಾರ್ಚ್‌ ನಂತರದಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯ ಮೊತ್ತವು ಹೆಚ್ಚುತ್ತಲೇ ಸಾಗಿದೆ.

ನವೆಂಬರ್ ಅಂತ್ಯದ ಹೊತ್ತಿಗೆ ದೇಶದ ಮ್ಯೂಚುವಲ್‌ ಫಂಡ್‌ ಉದ್ಯಮ ನಿರ್ವಹಿಸುತ್ತಿರುವ ಆಸ್ತಿಯ ಒಟ್ಟು ಮೌಲ್ಯವು ₹ 38.45 ಲಕ್ಷ ಕೋಟಿಗೆ ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.