ADVERTISEMENT

ಒಂದು ವರ್ಷದಲ್ಲಿ ವಿದ್ಯುತ್ ಚಾಲಿತ, ಪೆಟ್ರೋಲ್ ವಾಹನ ಬೆಲೆ ಸರಿಸಮ: ನಿತಿನ್ ಗಡ್ಕರಿ

ಪಿಟಿಐ
Published 17 ಜೂನ್ 2022, 11:23 IST
Last Updated 17 ಜೂನ್ 2022, 11:23 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ    

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಬೆಲೆಯು ಇನ್ನು ಒಂದು ವರ್ಷದಲ್ಲಿ ಪೆಟ್ರೋಲ್ ವಾಹನಗಳ ಬೆಲೆಗೆ ಸರಿಸಮ ಆಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಬದಲಾಗಿ ಬೆಳೆ ತ್ಯಾಜ್ಯದಿಂದ ತಯಾರಿಸಿದ ಎಥೆನಾಲ್‌ಅನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಸಾರಿಗೆಗೆ ಜಲ ಮಾರ್ಗಗಳು ರಸ್ತೆ ಮಾರ್ಗಕ್ಕಿಂತ ಕಡಿಮೆ ವೆಚ್ಚದವು, ಜಲ ಮಾರ್ಗಗಳು ಇನ್ನೂ ಹೆಚ್ಚಾಗಲಿವೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT