
ನವದೆಹಲಿ: ನೀತಿ ಆಯೋಗ ಸಿದ್ಧಪಡಿಸಿರುವ ರಫ್ತು ಸಿದ್ಧತೆ ಸೂಚ್ಯಂಕ– 2024ರಲ್ಲಿ (Export Preparedness Index-EPI) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತಮಿಳುನಾಡು ಮತ್ತು ಗುಜರಾತ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಪಂಜಾಬ್ ಇವೆ.
ಕರ್ನಾಟಕ ಸೂಚ್ಯಂಕದ ಪಟ್ಟಿಯಲ್ಲಿ ಟಾಪ್-5ರ ಸ್ಥಾನದಿಂದ ಹೊರಗಿದೆ.
ರಫ್ತು ಸಿದ್ಧತೆ ಸೂಚ್ಯಂಕ 2024 -ಟಾಪ್-5ರಲ್ಲಿ ಸ್ಥಾನ ಪಡೆದ ರಾಜ್ಯಗಳಿವು..
ಮಹಾರಾಷ್ಟ್ರ
ತಮಿಳುನಾಡು
ಗುಜರಾತ್
ಉತ್ತರ ಪ್ರದೇಶ
ಆಂಧ್ರ ಪ್ರದೇಶ
ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಉತ್ತರಾಖಂಡ ಮೊದಲಸ್ಥಾನ ಪಡೆದುಕೊಂಡಿದೆ. ನಂತರ ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ದಾದ್ರ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು, ಗೋವಾ ಮತ್ತು ತ್ರಿಪುರ ಸ್ಥಾನ ಪಡೆದಿವೆ.
ರಾಜ್ಯಗಳ ರಫ್ತು ಸಾಮರ್ಥ್ಯ ಮತ್ತು ಸಾಧನೆಯನ್ನು ಗಮನಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.