ADVERTISEMENT

ಫ್ಲಿಪ್‌ಕಾರ್ಟ್: ಮಾರಾಟಗಾರರಿಗೆ ಶುಲ್ಕ ವಿನಾಯಿತಿ

ಪಿಟಿಐ
Published 14 ನವೆಂಬರ್ 2025, 14:38 IST
Last Updated 14 ನವೆಂಬರ್ 2025, 14:38 IST
.
.   

ನವದೆಹಲಿ: ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌, ತನ್ನ ವೇದಿಕೆಯ ಮೂಲಕ ₹1 ಸಾವಿರಕ್ಕಿಂತ ಕಡಿಮೆ ಬೆಲೆ ಹೊಂದಿರುವ ಎಲ್ಲ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಅರ್ಹ ಮಾರಾಟಗಾರರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಿದೆ. 

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್ಎಂಇ) ಬೆಂಬಲ ನೀಡಲು, ಉತ್ಪನ್ನಗಳು ಗ್ರಾಹಕರಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಶುಕ್ರವಾರ ಹೇಳಿದೆ. 

ಈ ಹೊಸ ಮಾದರಿಯು ಫ್ಲಿಪ್‌ಕಾರ್ಟ್‌ ಸಮೂಹದ ಶಾಪ್ಸಿಗೆ ಕೂಡ ಅನ್ವಯ ಆಗಲಿದೆ. ಇಲ್ಲಿ ಎಲ್ಲ ಉತ್ಪನ್ನಗಳಿಗೆ (ದರ ಲೆಕ್ಕಿಸದೆ) ಶುಲ್ಕ ವಿನಾಯಿತಿ ಇರಲಿದೆ ಎಂದು ತಿಳಿಸಿದೆ.

ADVERTISEMENT

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.