ADVERTISEMENT

ಕೋವಿಡ್ ಲಸಿಕೆ: ಜಿಎಸ್‌ಟಿ ವಿನಾಯಿತಿ ಇಲ್ಲ

ಪಿಟಿಐ
Published 9 ಮೇ 2021, 19:30 IST
Last Updated 9 ಮೇ 2021, 19:30 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಕೋವಿಡ್ ಲಸಿಕೆ, ಔಷಧ ಹಾಗೂ ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಲಸಿಕೆಗೆ ಶೇಕಡ 5ರಷ್ಟು ತೆರಿಗೆ ಇದೆ. ಕೋವಿಡ್‌ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಶೇ 12ರಷ್ಟು ತೆರಿಗೆ ಇದೆ. ‘ಜಿಎಸ್‌ಟಿಯಿಂದ ಪೂರ್ತಿಯಾಗಿ ವಿನಾಯಿತಿ ನೀಡಿದರೆ, ಲಸಿಕೆ ತಯಾರಕರಿಗೆ ತಾವು ಕಚ್ಚಾ ವಸ್ತುಗಳಿಗೆ ಪಾವತಿಸಿರುವ ತೆರಿಗೆಯನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ಆ ಮೊತ್ತವನ್ನು ಗ್ರಾಹಕರ ಮೇಲೆ ವರ್ಗಾವಣೆ ಮಾಡುತ್ತಾರೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.

‘ಶೇ 5ರಷ್ಟು ತೆರಿಗೆ ವಿಧಿಸುವುದರಿಂದ ತಯಾರಕರಿಗೆ ಐಟಿಸಿ (ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್) ಪ್ರಯೋಜನ ಪಡೆಯಲು ಆಗುತ್ತದೆ. ಹಾಗಾಗಿ, ಲಸಿಕೆಗೆ ಜಿಎಸ್‌ಟಿ ವಿನಾಯಿತಿ ನೀಡುವುದರಿಂದ ಗ್ರಾಹಕರಿಗೆ ಲಾಭ ಆಗುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.