ADVERTISEMENT

ಎಫ್‌ಪಿಐ: ₹30 ಸಾವಿರ ಕೋಟಿ ವಾ‍ಪಸ್‌

ಪಿಟಿಐ
Published 16 ಮಾರ್ಚ್ 2025, 13:38 IST
Last Updated 16 ಮಾರ್ಚ್ 2025, 13:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಮೆರಿಕದ ಸುಂಕ ನೀತಿಯಿಂದ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ವ್ಯಾಪಾರ ಅನಿಶ್ಚಿತ ಸ್ಥಿತಿಯಿಂದಾಗಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂಪಡೆಯುವುದು ಮುಂದುವರಿದಿದೆ.

ಮಾರ್ಚ್‌ ತಿಂಗಳ ಮೊದಲ ಎರಡು ವಾರದಲ್ಲಿ ಒಟ್ಟು ₹30 ಸಾವಿರ ಕೋಟಿಯನ್ನು ವಾ‍ಪಸ್‌ ಪಡೆಯಲಾಗಿದೆ. ಫೆಬ್ರುವರಿಯಲ್ಲಿ ₹34,574 ಕೋಟಿ ಹಿಂಪಡೆಯಲಾಗಿತ್ತು. ಪ್ರಸಕ್ತ ವರ್ಷದ ಆರಂಭದಿಂದ ಇಲ್ಲಿಯವರೆಗೆ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಒಟ್ಟು ₹1.42 ಲಕ್ಷ ಕೋಟಿಯನ್ನು ವಾಪಸ್‌ ಪಡೆದಿದ್ದಾರೆ.

ದೇಶದ ಈಕ್ವಿಟಿ ಮಾರುಕಟ್ಟೆಯಿಂದ ಹಿಂ‍ಪಡೆಯುವ ವಿದೇಶಿ ಬಂಡವಾಳವು ಚೀನಾದ ಮಾರುಕಟ್ಟೆಯಲ್ಲಿ ಹೂಡಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

ಇತ್ತೀಚೆಗೆ ಕುಸಿತ ಕಂಡಿರುವ ಡಾಲರ್‌ ಸೂಚ್ಯಂಕವು ಬಂಡವಾಳ ಹೊರಹರಿವಿನ ಪ್ರಮಾಣವನ್ನು ಅಲ್ಪಮಟ್ಟಿಗೆ ತಗ್ಗಿಸಿದೆ. ಆದರೆ, ಅಮೆರಿಕ ಮತ್ತು ಇತರೆ ದೇಶಗಳ ನಡುವಿನ ಸುಂಕ ಸಮರದಿಂದ ಮತ್ತಷ್ಟು ಬಂಡವಾಳ ಹೊರಹೋಗಲಿದ್ದು, ಚಿನ್ನದ ಮೇಲೆ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.