ADVERTISEMENT

ಎಫ್‌ಪಿಐ: ₹17,425 ಕೋಟಿ ಹೂಡಿಕೆ

ಎ.ಜಿ.ವೆಂಕಟೇಶ್, ಬೆಂಗಳೂರು
Published 27 ಏಪ್ರಿಲ್ 2025, 14:49 IST
Last Updated 27 ಏಪ್ರಿಲ್ 2025, 14:49 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ಏ‌ಪ್ರಿಲ್ 21ರಿಂದ 25ರ ವರೆಗೆ ನಡೆದ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹17,425 ಕೋಟಿ ಹೂಡಿಕೆ ಮಾಡಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರ ಸ್ವಲ್ಪ‍ಮಟ್ಟಿಗೆ ತಣ್ಣಗಾಗುವ ಸಾಧ್ಯತೆಯಿದೆ. ಇದು ಜಾಗತಿಕ ವ್ಯಾಪಾರ ಬಿಕ್ಕಟ್ಟನ್ನು ಕಡಿಮೆ ಮಾಡಿದ್ದು, ಹೂಡಿಕೆದಾರರಲ್ಲಿನ ಆತಂಕವನ್ನು ದೂರ ಮಾಡಿದೆ. ಇದರಿಂದ ವಿದೇಶಿ ಹೂಡಿಕೆದಾರರು ದೇಶೀಯ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಇನ್ವೆಸ್ಟ್‌ಮೆಂಟ್‌ ರಿಸರ್ಚ್ ಇಂಡಿಯಾದ ವ್ಯವಸ್ಥಾಪಕ (ಸಂಶೋಧನೆ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಕ್ಕೆ ವಿರಾಮ ನೀಡುವ ನಿರೀಕ್ಷೆಯಿದೆ. ಡಾಲರ್ ಮೌಲ್ಯವು ಸ್ಥಿರವಾಗಿರುವುದು ದೇಶೀಯ ಮಾರುಕಟ್ಟೆಗೆ ಬಲ ನೀಡಿದೆ. ಅಲ್ಲದೆ, ಹಣದುಬ್ಬರ ಇಳಿಕೆ ಮತ್ತು ಮುಂಗಾರು ಉತ್ತಮವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿಯು ವಿದೇಶಿ ಹೂಡಿಕೆ ಹೆಚ್ಚಳಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.