ADVERTISEMENT

ಈಕ್ವಿಟಿ ಮಾರುಕಟ್ಟೆಯಿಂದ ₹10,355 ಕೋಟಿ ಹಿಂಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಪಿಟಿಐ
Published 6 ಏಪ್ರಿಲ್ 2025, 14:22 IST
Last Updated 6 ಏಪ್ರಿಲ್ 2025, 14:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಈಕ್ವಿಟಿ ಮಾರುಕಟ್ಟೆಯಿಂದ (ಏಪ್ರಿಲ್‌ 1ರಿಂದ 4ರ ವರೆಗೆ) ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹10,355 ಕೋಟಿ ಮೊತ್ತವನ್ನು ವಾಪಸ್‌ ಪಡೆದಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಪ್ರತಿ ಸುಂಕ ವಿಧಿಸಿದ್ದಾರೆ. ಇದರಿಂದ ಸೃಷ್ಟಿಯಾಗಿರುವ ಅನಿಶ್ಚಿತ ಸ್ಥಿತಿಯಿಂದಾಗಿ ಬಂಡವಾಳ ಹೊರಹೋಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಜನವರಿ ಆರಂಭದಿಂದ ಇಲ್ಲಿಯವರೆಗೆ ವಿದೇಶಿ ಹೂಡಿಕೆದಾರರು ₹1.27 ಲಕ್ಷ ಕೋಟಿ ಹಿಂಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.