ADVERTISEMENT

ಕುಸಿತದ ಅಂದಾಜು ತಗ್ಗಿಸಿದ ಎಸ್‌ಬಿಐ

ಪಿಟಿಐ
Published 16 ಡಿಸೆಂಬರ್ 2020, 16:45 IST
Last Updated 16 ಡಿಸೆಂಬರ್ 2020, 16:45 IST
ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) -ಸಾಂದರ್ಭಿಕ ಚಿತ್ರ
ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) -ಸಾಂದರ್ಭಿಕ ಚಿತ್ರ   

ಮುಂಬೈ: ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕುಸಿತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ (–)7.4ರಷ್ಟು ಇರಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ. ಎಸ್‌ಬಿಐ ಈ ಮೊದಲು ಜಿಡಿಪಿ ಕುಸಿತವು ಶೇ (–)10.9ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದರೆ, ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವ ಕಾರಣ, ಮೊದಲ ಅಂದಾಜಿನಲ್ಲಿ ಬದಲಾವಣೆ ತಂದಿದೆ.

ಹಾಲಿ ಆರ್ಥಿಕ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 0.1ರಷ್ಟು ಇರಲಿದೆ. ನಾಲ್ಕನೆಯ ತ್ರೈಮಾಸಿಕದಲ್ಲಿ ಬೆಳವಣಿಗೆ ಪ್ರಮಾಣ ಶೇ 1.7ರಷ್ಟು ಇರುವ ನಿರೀಕ್ಷೆ ಇದೆ. ಇನ್ನೊಂದು ಸುತ್ತಿನ ಕೊರೊನಾ ಅಲೆ ಇರಲಾರದು ಎಂಬ ನಿರೀಕ್ಷೆಯಲ್ಲಿ ಈ ಎಲ್ಲ ಅಂದಾಜುಗಳನ್ನು ಮಾಡಲಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT