ಬೆಂಗಳೂರು: ಯುಗಾದಿ ಮುನ್ನಾದಿನ ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. 10 ಗ್ರಾಂ ನ 24 ಕ್ಯಾರೆಟ್ ಚಿನ್ನದ ದರ ₹440 ಏರಿಕೆಯಾಗುವ ಮೂಲಕ ₹71,080ಕ್ಕೆ ತಲುಪಿದೆ. ಬೆಳ್ಳಿ ದರ ಕೆ.ಜಿಗೆ ₹1,076 ಏರಿಕೆಯಾಗಿದ್ದು ₹82,064ಕ್ಕೆ ತಲುಪಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ ₹71,430 ಆಗಿದೆ. ಮುಂಬೈನಲ್ಲಿ ₹71,280 ಆಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹71,280 ಕ್ಕೆ ಏರಿಕೆಯಾಗಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳು ಚಿನ್ನದ ಬೆಲೆ ಏರಿಕೆಯಾಗಲು ಕಾರಣವಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.