ಚಿನ್ನ, ಬೆಳ್ಳಿ ದರ
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಮಂಗಳವಾರದ ವಹಿವಾಟಿನಲ್ಲಿ ಏರಿಕೆಯಾಗಿದೆ.
ಚಿನ್ನದ ದರವು 10 ಗ್ರಾಂಗೆ (ಶೇ 99.9ರಷ್ಟು ಪರಿಶುದ್ಧತೆ) ₹700 ಏರಿಕೆಯಾಗಿದ್ದು, ₹79,700 ಆಗಿದೆ. ಸ್ಟ್ಯಾಂಡರ್ಡ್ ಚಿನ್ನದ (ಶೇ 99.5 ಶುದ್ಧತೆ) ಬೆಲೆಯು ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದ್ದು, ₹79,300 ಆಗಿದೆ.
ಬೆಳ್ಳಿ ಧಾರಣೆಯು ಕೆ.ಜಿಗೆ ₹1,300 ಹೆಚ್ಚಳವಾಗಿದ್ದು, ₹92 ಸಾವಿರ ಆಗಿದೆ.
ದೇಶೀಯ ಆಭರಣ ತಯಾರಕರು ಮತ್ತು ಮಾರಾಟಗಾರರಿಂದ ಚಿನ್ನದ ಖರೀದಿ ಹೆಚ್ಚಳವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗಿದೆ. ಇದರಿಂದ ಹಳದಿ ಲೋಹದ ದರ ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.