ಚಿನ್ನ, ಬೆಳ್ಳಿ ದರ
ನವದೆಹಲಿ: ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಐದನೇ ದಿನವಾದ ಮಂಗಳವಾರವೂ ಚಿನ್ನದ ಧಾರಣೆ ಏರಿಕೆಯಾಗಿದೆ.
10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹500 ಹೆಚ್ಚಳವಾಗಿ, ₹85,800ರಂತೆ ಮಾರಾಟವಾಗಿದೆ. ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ಬೆಲೆ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹85,400 ಆಗಿದೆ.
ಜನವರಿ 1ರಿಂದ ಇಲ್ಲಿಯವರೆಗೆ 10 ಗ್ರಾಂ ಚಿನ್ನದ ದರವು ₹6,410 (ಶೇ 8) ಹೆಚ್ಚಳವಾಗಿದೆ.
ಬೆಳ್ಳಿ ಧಾರಣೆಯು ಕೆ.ಜಿಗೆ ₹500 ಇಳಿಕೆಯಾಗಿ, ₹95,500 ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.