ADVERTISEMENT

ಚಿನ್ನ–ಬೆಳ್ಳಿ ಮತ್ತೆ ದುಬಾರಿ: ಚಿನ್ನದ ದರ 10 ಗ್ರಾಂಗೆ ₹71,400

ಪಿಟಿಐ
Published 2 ಏಪ್ರಿಲ್ 2024, 2:49 IST
Last Updated 2 ಏಪ್ರಿಲ್ 2024, 2:49 IST
ಚಿನ್ನ, ಬೆಳ್ಳಿ
ಚಿನ್ನ, ಬೆಳ್ಳಿ   

ನವದೆಹಲಿ: ‘ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಳದಿಂದಾಗಿ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂ ಬೆಲೆ ₹1,070ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ₹68,420ಕ್ಕೆ ಸೋಮವಾರ ಮಾರಾಟವಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.

ಹಿಂದಿನ ಮಾರಾಟದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹67,350ರಷ್ಟು ದಾಖಲಾಗಿತ್ತು. 

ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು ಪ್ರತಿ ಕೆ.ಜಿ.ಗೆ ₹1,120ರಷ್ಟು ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಕೆ.ಜಿ. ಬೆಳ್ಳಿ ಬೆಲೆ ₹77,450ರಷ್ಟಿತ್ತು. ಸೋಮವಾರ ಇದು ₹78,570ಕ್ಕೆ ಏರಿಕೆಯಾಗಿದೆ.

ADVERTISEMENT

‘ಬಡ್ಡಿ ದರ ಇಳಿತಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಕ್ರಮ ಕೈಗೊಂಡ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ಕಂಡಿದೆ. ಇದರ ಜತೆಯಲ್ಲಿ ಚೀನಾದಿಂದಲೂ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ವಿಶ್ಲೇಷಕ ದಿಲೀಪ್ ಪಾರ್ಮಾರ್ ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,265.73 ಅಮೆರಿಕನ್ ಡಾಲರ್‌ನಷ್ಟಾಗಿದೆ. ಹೀಗಾಗಿ ಎಂಸಿಎಕ್ಸ್ ಪ್ಯೂಚರ್‌ನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ ₹69,487ರಷ್ಟು ದಾಖಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.