ADVERTISEMENT

ನಿರ್ಮಾಣ ಹಂತದಲ್ಲಿನ ಮನೆಗೆಜಿಎಸ್‌ಟಿ ಶೇ 5ಕ್ಕೆ ಇಳಿಕೆ ನಿರೀಕ್ಷೆ

ಪಿಟಿಐ
Published 23 ಡಿಸೆಂಬರ್ 2018, 16:38 IST
Last Updated 23 ಡಿಸೆಂಬರ್ 2018, 16:38 IST
   

ನವದೆಹಲಿ: ಜಿಎಸ್‌ಟಿ ಮಂಡಳಿಯು ಮುಂದಿನ ಸಭೆಯಲ್ಲಿನಿರ್ಮಾಣ ಹಂತದಲ್ಲಿರುವ ಮನೆ ಅಥವಾ ಫ್ಲ್ಯಾಟ್‌ಗಳ ಮಾರಾಟ ತೆರಿಗೆ ತಗ್ಗಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಅಥವಾ ವಾಸಕ್ಕೆ ಸಿದ್ಧವಿರುವ ವಸತಿ ಯೋಜನೆಗಳ ಮಾರಾಟಕ್ಕೆ ಸದ್ಯ ಶೇ 12ರಷ್ಟು ಜಿಎಸ್‌ಟ ಇದ್ದು, ಅದನ್ನು ಶೇ 5ಕ್ಕೆ ಇಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ನಿರ್ಮಾಣ ಹಂತದಲ್ಲಿರುವುದರಿಂದ ಮನೆಗಳ ಮಾರಾಟ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ ಸಿಕ್ಕಿರುವುದಿಲ್ಲ. ಈ ಕಾರಣಕ್ಕೆ ಜಿಎಸ್‌ಟಿಪಾವತಿಸಬೇಕಾಗುತ್ತದೆ.

ADVERTISEMENT

ಕಾಮಗಾರಿ ಪೂರ್ಣಗೊಂಡು ಪ್ರಮಾಣ ಪತ್ರ ಪಡೆದಿರುವ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ನಿರ್ಮಿಸಿರುವ ವಸತಿ ಯೋಜನೆಗಳಲ್ಲಿ ಮನೆ
ಖರೀದಿಸುವವರಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.