ಸಾಂದರ್ಭಿಕ ಚಿತ್ರ
ಮುಂಬೈ: ಟೊಮೆಟೊ ಬೆಲೆಯಲ್ಲಿ ಹೆಚ್ಚಳ ಆದ ಪರಿಣಾಮವಾಗಿ ಮನೆ ಊಟದ ವೆಚ್ಚವು ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಹೆಚ್ಚಳ ಆಗಿದೆ.
ಮನೆಯಲ್ಲಿ ಸಿದ್ಧಪಡಿಸುವ ಶಾಕಾಹಾರಿ ಊಟಕ್ಕೆ ಮೇ ತಿಂಗಳಲ್ಲಿ ಸರಾಸರಿ ₹26.2 ವೆಚ್ಚ ಆಗುತ್ತಿತ್ತು. ಇದು ಜೂನ್‌ನಲ್ಲಿ ₹27.1ಕ್ಕೆ ಏರಿಕೆ ಆಗಿದೆ. ಅಂದರೆ ಶೇ 3ರಷ್ಟು ಬೆಲೆ ಏರಿಕೆ ಕಂಡುಬಂದಿದೆ. ಇದೇ ಅವಧಿಯಲ್ಲಿ ಮಾಂಸಾಹಾರಿ ಊಟ ಸಿದ್ಧಪಡಿಸುವ ವೆಚ್ಚದಲ್ಲಿ ಶೇ 4ರಷ್ಟು ಹೆಚ್ಚಳ ಆಗಿದೆ ಎಂದು ವರದಿಯೊಂದು ಹೇಳಿದೆ.
ಮೇ ತಿಂಗಳಲ್ಲಿ ಮಾಂಸಾಹಾರಿ ಊಟವನ್ನು ಮನೆಯಲ್ಲಿ ಸಿದ್ಧಪಡಿಸಲು ₹52.6 ಬೇಕಾಗುತ್ತಿತ್ತು. ಅದು ಜೂನ್‌ನಲ್ಲಿ ₹54.8ಕ್ಕೆ ಹೆಚ್ಚಳವಾಗಿದೆ ಎಂದು ದೇಶಿ ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಸಿದ್ಧಪಡಿಸಿರುವ ‘ರೊಟ್ಟಿ, ಅನ್ನ, ಬೆಲೆ’ ಹೆಸರಿನ ವರದಿಯಲ್ಲಿ ಹೇಳಲಾಗಿದೆ.
ಟೊಮೆಟೊ ಆವಕದಲ್ಲಿ ಶೇ 8ರಷ್ಟು ಇಳಿಕೆ ಕಂಡುಬಂದ ಪರಿಣಾಮವಾಗಿ ಅದರ ಬೆಲೆಯು ಶೇ 36ರಷ್ಟು ಹೆಚ್ಚಳ ಕಂಡಿತು ಎಂದು ಕ್ರಿಸಿಲ್ ಹೇಳಿದೆ. ಅಲ್ಲದೆ, ಆಲೂಗಡ್ಡೆ ಬೆಲೆಯಲ್ಲಿ ಶೇ 4ರಷ್ಟು ಏರಿಕೆ ಆಗಿದೆ.
ಬ್ರಾಯ್ಲರ್ ಕೋಳಿ ಮಾಂಸದ ಬೆಲೆಯಲ್ಲಿ ಶೇ 5ರಷ್ಟು ಏರಿಕೆ ಆಗಿದೆ. ಇದು ಮಾಂಸಾಹಾರಿ ಊಟದ ವೆಚ್ಚ ಹೆಚ್ಚಾಗಲು ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.