ADVERTISEMENT

ಜ. 1ರಿಂದ ಹುಂಡೈ ವಾಹನಗಳ ಬೆಲೆ ಏರಿಕೆ

ಪಿಟಿಐ
Published 5 ಡಿಸೆಂಬರ್ 2024, 13:40 IST
Last Updated 5 ಡಿಸೆಂಬರ್ 2024, 13:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ (ಎಚ್‌ಎಂಐಎಲ್‌) ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು ಜನವರಿ 1ರಿಂದ ಹೆಚ್ಚಿಸಲಿದೆ.

ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಕರೆನ್ಸಿ ವಿನಿಮಯ ದರವು ವ್ಯತಿರಿಕ್ತವಾಗಿದೆ. ಅಲ್ಲದೆ, ಸಾಗಣೆ ವೆಚ್ಚವೂ ಹೆಚ್ಚಳವಾಗಿದೆ. ಹಾಗಾಗಿ, ವಾಹನಗಳ ಬೆಲೆಯನ್ನು ₹25 ಸಾವಿರದವರೆಗೆ ಏರಿಕೆ ಮಾಡಲಾಗುವುದು ಎಂದು ಕಂಪನಿಯು ಗುರುವಾರ ತಿಳಿಸಿದೆ.

2025ರಿಂದ ತಯಾರಿಸುವ ವಾಹನಗಳಿಗೆ ಈ ಹೊಸ ದರ ಏರಿಕೆಯು ಅನ್ವಯವಾಗಲಿದೆ. 

ADVERTISEMENT

‘ಉತ್ಪಾದನಾ ವೆಚ್ಚವು ನಿರಂತರವಾಗಿ ಏರಿಕೆಯಾಗುತ್ತಿದೆ. ಹಾಗಾಗಿ, ಇದನ್ನು ಅಲ್ಪ ಪ್ರಮಾಣದಲ್ಲಿ ಬೆಲೆ ಹೆಚ್ಚಿಸುವ ಮೂಲಕ ಸರಿದೂಗಿಸುವುದು ಅನಿವಾರ್ಯವಾಗಿದೆ. ಇದು ಗ್ರಾಹಕರ ಮೇಲೆ ಅಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ’ ಎಂದು ಎಚ್‌ಎಂಐಎಲ್‌ನ ಸಿಒಒ ತರುಣ್ ಗಾರ್ಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.