ADVERTISEMENT

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಗಡುವು ವಿಸ್ತರಿಸಿ: ಐಸಿಎಐ

ಪಿಟಿಐ
Published 13 ಸೆಪ್ಟೆಂಬರ್ 2020, 12:30 IST
Last Updated 13 ಸೆಪ್ಟೆಂಬರ್ 2020, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2018–19ನೇ ಹಣಕಾಸು ವರ್ಷದ ವಾರ್ಷಿಕ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಜಿಎಸ್‌ಟಿ ಮಂಡಳಿಗೆ ಪತ್ರ ಬರೆದಿದೆ.

2018–19ನೇ ಹಣಕಾಸು ವರ್ಷದ ವಾರ್ಷಿಕ ರಿಟರ್ನ್ಸ್‌ ಸಲ್ಲಿಸಲು ಈ ತಿಂಗಳ 30 ಕೊನೆಯ ದಿನ. ಕೋವಿಡ್–19ರ ಪರಿಣಾಮವಾಗಿ ‘ಐಸಿಎಐ’ನ ಬಹುತೇಕ ಕಚೇರಿಗಳಲ್ಲಿ ಭಾಗಶಃ ಕೆಲಸ ಮಾತ್ರ ನಡೆಯುತ್ತಿದೆ. ಹೀಗಾಗಿ ಮೂರು ತಿಂಗಳವರೆಗೆ ರಿಟರ್ನ್ಸ್‌ ಸಲ್ಲಿಕೆಯ ಅವಧಿ ವಿಸ್ತರಿಸುವಂತೆ ಅದು ಕೇಳಿಕೊಂಡಿದೆ. ಇದರಿಂದ ವರ್ತಕರಿಗೂ ವಿನಾಯಿತಿ ಸಿಗಲಿದೆ ಎಂದೂ ಹೇಳಿದೆ.

‘ಕೋವಿಡ್‌–19 ಸಾಂಕ್ರಾಮಿಕವು ಜನಜೀನವದ ಮೇಲಷ್ಟೇ ಅಲ್ಲದೆ, ವಾಣಿಜ್ಯ ವಹಿವಾಟುಗಳ ಮೇಲೆಯೂ ಪರಿಣಾಮ ಉಂಟುಮಾಡಿದೆ. ಉದ್ಯಮಗಳು ಸಂಕಷ್ಟದಲ್ಲಿ ಇರುವ ಈ ಪರಿಸ್ಥಿತಿಯಲ್ಲಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯತ್ತ ಗಮನ ಹರಿಸುವುದರಿಂದ ವಹಿವಾಟು ನಡೆಸಲು ಕಷ್ಟವಾಗಲಿದೆ. ಈ ದೃಷ್ಟಿಯಿಂದ ಅವಧಿ ವಿಸ್ತರಿಸುವಂತೆ ಐಸಿಎಐ ಪತ್ರ ಬರೆದಿರುವುದನ್ನು ಉದ್ಯಮವು ಪ್ರಶಂಸಿಸುತ್ತದೆ. ಒಂದೊಮ್ಮೆ ಸರ್ಕಾರ ಐಸಿಎಐ ಮನವಿಯನ್ನು ಒಪ್ಪಿಕೊಂಡರೆ ಅದರಿಂದ ಉದ್ಯಮಗಳಿಗೆ ತುಸು ನೆಮ್ಮದಿ ಸಿಗಲಿದೆ’ ಎಂದು ‘ಇವೈ’ನ ತೆರಿಗೆ ಪಾಲುದಾರ ಅಭಿಷೇಕ್‌ ಜೈನ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.