ADVERTISEMENT

ಸಾಲದ ಬಡ್ಡಿದರ ಹೆಚ್ಚಿಸಿದ ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ

ಪಿಟಿಐ
Published 5 ಮೇ 2022, 14:12 IST
Last Updated 5 ಮೇ 2022, 14:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆರ್‌ಬಿಐ ರೆಪೊ ದರ ಏರಿಕೆ ಮಾಡಿರುವುದಕ್ಕೆ ಅನುಗುಣವಾಗಿ ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿವೆ.

ಐಸಿಐಸಿಐ ಬ್ಯಾಂಕ್‌ ಬುಧವಾರದಿಂದಲೇ ಜಾರಿಗೆ ಬರುವಂತೆ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್ ರೇಟ್‌ (ಇಬಿಎಲ್‌ಆರ್‌) ಅನ್ನು ಶೇ 8.10ಕ್ಕೆ ಹೆಚ್ಚಿಸಿದೆ.

ಬ್ಯಾಂಕ್‌ ಆಫ್‌ ಬರೋಡಾ ಗುರುವಾರದಿಂದ ಅನ್ವಯಿಸುವಂತೆ ರೆಪೊ ದರ ಆಧರಿಸಿದ ಸಾಲದ ಮೇಲಿನ ಬಡ್ಡಿದರವನ್ನು ಅನ್ನು ಶೇ 6.90ಕ್ಕೆ ಏರಿಕೆ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.