ADVERTISEMENT

ಜಪಾನ್ ಹಿಂದಿಕ್ಕಿದ ಭಾರತ 4ನೇ ಅತಿದೊಡ್ಡ ಆರ್ಥಿಕತೆ: ನೀತಿ ಆಯೋಗ

ಪಿಟಿಐ
Published 25 ಮೇ 2025, 7:10 IST
Last Updated 25 ಮೇ 2025, 7:10 IST
<div class="paragraphs"><p>ಭಾರತದ ಆರ್ಥಿಕತೆ</p></div>

ಭಾರತದ ಆರ್ಥಿಕತೆ

(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)

ನವದೆಹಲಿ: ‘ಜಪಾನ್‌ ದೇಶವನ್ನು ಹಿಂದಿಕ್ಕಿರುವ ಭಾರತವು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ’ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ.

ADVERTISEMENT

ನೀತಿ ಆಯೋಗದ ಸಭೆಯಲ್ಲಿ ನಡೆದ ಚರ್ಚೆ ಕುರಿತು ವಿವರ ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ‘ಜಾಗತಿಕ ಮಟ್ಟದ ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಯು ಭಾರತಕ್ಕೆ ಅನುಕೂಲಕರವಾಗಿದೆ’ ಎಂದು ಹೇಳಿದರು.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ದತ್ತಾಂಶಗಳನ್ನು ಉಲ್ಲೇಖಿಸಿದ ಅವರು, ‘ಭಾರತವು ಸದ್ಯ 4 ಟ್ರಿಲಿಯನ್‌ ಡಾಲರ್‌ (₹340 ಲಕ್ಷ ಕೋಟಿ) ಆರ್ಥಿಕತೆ ಹೊಂದಿದ ದೇಶವಾಗಿದೆ’ ಎಂದರು.

ಪ್ರಸ್ತುತ ಅಮೆರಿಕ, ಚೀನಾ ಮತ್ತು ಜರ್ಮನಿಯು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿವೆ. ಆ ನಂತರದ ಸ್ಥಾನದಲ್ಲಿ ಭಾರತವಿದೆ ಎಂದು ಹೇಳಿದರು.

2024ರವರೆಗೂ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಕೇಂದ್ರ ಸರ್ಕಾರವು ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಸ್ಥಿರತೆ ಕಾಯ್ದುಕೊಂಡರೆ ಮುಂದಿನ ಮೂರು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ಯಾಗಲಿದೆ ಎಂದು ಹೇಳಿದರು.

ಅಮೆರಿಕದ ಬದಲಾಗಿ ಭಾರತ ಸೇರಿ ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿ ತಯಾರಿಸುವ ಆ್ಯಪಲ್‌ ಕಂಪನಿಯ ಐಫೋನ್‌ಗಳಿಗೆ ಸುಂಕ ವಿನಾಯಿತಿ ನೀಡುವುದಿಲ್ಲ ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸುಂಕ ಹೇರಿಕೆ ಬಗ್ಗೆ ಇನ್ನೂ ಖಚಿತತೆ ಇಲ್ಲ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಾರತವು ಐಫೋನ್‌ ತಯಾರಿಕೆಗೆ ಅಗ್ಗದ ಸ್ಥಳವಾಗಿದೆ’ ಎಂದು ಪ್ರತಿಕ್ರಿಯಿಸಿದರು. 

ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಜಮೀನು ಹಾಗೂ ಪ್ರಮುಖವಲ್ಲದ ಆಸ್ತಿಗಳ ನಗದೀಕರಣ ಪ್ರಕ್ರಿಯೆಯನ್ನು ಸಿದ್ಧಪಡಿಸಲಾಗುತ್ತಿದೆ. ಆಗಸ್ಟ್‌ನಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು. ‘ಜಪಾನ್‌ ದೇಶವನ್ನು ಹಿಂದಿಕ್ಕಿರುವ ಭಾರತವು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ’ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ.

ನೀತಿ ಆಯೋಗದ ಸಭೆಯಲ್ಲಿ ನಡೆದ ಚರ್ಚೆ ಕುರಿತು ವಿವರ ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ‘ಜಾಗತಿಕ ಮಟ್ಟದ ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಯು ಭಾರತಕ್ಕೆ ಅನುಕೂಲಕರವಾಗಿದೆ’ ಎಂದು ಹೇಳಿದರು.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ದತ್ತಾಂಶಗಳನ್ನು ಉಲ್ಲೇಖಿಸಿದ ಅವರು, ‘ಭಾರತವು ಸದ್ಯ 4 ಟ್ರಿಲಿಯನ್‌ ಡಾಲರ್‌ (₹340 ಲಕ್ಷ ಕೋಟಿ) ಆರ್ಥಿಕತೆ ಹೊಂದಿದ ದೇಶವಾಗಿದೆ’ ಎಂದರು.

ಪ್ರಸ್ತುತ ಅಮೆರಿಕ, ಚೀನಾ ಮತ್ತು ಜರ್ಮನಿಯು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿವೆ. ಆ ನಂತರದ ಸ್ಥಾನದಲ್ಲಿ ಭಾರತವಿದೆ ಎಂದು ಹೇಳಿದರು.

2024ರವರೆಗೂ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಕೇಂದ್ರ ಸರ್ಕಾರವು ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಸ್ಥಿರತೆ ಕಾಯ್ದುಕೊಂಡರೆ ಮುಂದಿನ ಮೂರು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ಯಾಗಲಿದೆ ಎಂದು ಹೇಳಿದರು.

ಅಮೆರಿಕದ ಬದಲಾಗಿ ಭಾರತ ಸೇರಿ ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿ ತಯಾರಿಸುವ ಆ್ಯಪಲ್‌ ಕಂಪನಿಯ ಐಫೋನ್‌ಗಳಿಗೆ ಸುಂಕ ವಿನಾಯಿತಿ ನೀಡುವುದಿಲ್ಲ ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸುಂಕ ಹೇರಿಕೆ ಬಗ್ಗೆ ಇನ್ನೂ ಖಚಿತತೆ ಇಲ್ಲ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಾರತವು ಐಫೋನ್‌ ತಯಾರಿಕೆಗೆ ಅಗ್ಗದ ಸ್ಥಳವಾಗಿದೆ’ ಎಂದು ಪ್ರತಿಕ್ರಿಯಿಸಿದರು. 

ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಜಮೀನು ಹಾಗೂ ಪ್ರಮುಖವಲ್ಲದ ಆಸ್ತಿಗಳ ನಗದೀಕರಣ ಪ್ರಕ್ರಿಯೆಯನ್ನು ಸಿದ್ಧಪಡಿಸಲಾಗುತ್ತಿದೆ. ಆಗಸ್ಟ್‌ನಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಐಎಂಎಫ್‌ ವರದಿ ಹೇಳಿದ್ದೇನು? 

ಅಂತರರಾಷ್ಟ್ರೀಯ ಹಣಕಾಸು ನಿಧಿಯು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಆರ್ಥಿಕ ಮುನ್ನೋಟ ಕುರಿತ ವರದಿಯಲ್ಲಿ, ‘2025ರಲ್ಲಿ ಭಾರತವು 4.19 ಟ್ರಿಲಿಯನ್‌ ಡಾಲರ್‌ ಜಿಡಿಪಿಯೊಂದಿಗೆ (₹356.15 ಲಕ್ಷ ಕೋಟಿ) ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’ ಎಂದು ಹೇಳಿತ್ತು.

ಐಎಂಎಫ್‌ ವರದಿ ಅನ್ವಯ ಭಾರತದ ತಲಾ ಆದಾಯವು ದುಪ್ಪಟ್ಟುಗೊಂಡಿದೆ. 2013–14ರಲ್ಲಿ 1,438 ಡಾಲರ್‌ (₹1,22,476) ಇದ್ದ ತಲಾ ಆದಾಯವು, ಪ್ರಸಕ್ತ ವರ್ಷದಲ್ಲಿ 2,880 ಡಾಲರ್‌ಗೆ (₹2,45,293) ಮುಟ್ಟಿದೆ. 2025–26ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿಯು ಶೇ 6.2ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.

ವಿಕಸಿತ ಭಾರತಕ್ಕೆ ಕೇಂದ್ರದ ಒತ್ತು
ಕಳೆದ ಒಂದು ದಶಕದ ಅವಧಿಯಲ್ಲಿ ಭಾರತವು ವಿಶ್ವದ ಐದು ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ನೀತಿ ಆಯೋಗ ಪ್ರಕಟಿಸಿರುವ ‘2047ರ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ’ ಶೀರ್ಷಿಕೆಯ ವರದಿ ಹೇಳಿದೆ. 2024–25ರಲ್ಲಿ ವಿಶ್ವಬ್ಯಾಂಕ್‌ ಪ್ರಕಟಿಸಿರುವ ವರದಿ ಪ್ರಕಾರ 14,005 ಡಾಲರ್‌ (₹11,92,822) ತಲಾ ಆದಾಯ ಹೊಂದಿರುವ ದೇಶಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ಪರಿಗಣಿಸಲಾಗುತ್ತದೆ. 2047ರ ವೇಳೆಗೆ ಭಾರತವು ಈ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಗುರಿ ಹೊಂದಿದೆ. ಈ ವೇಳೆಗೆ ದೇಶದ ಜಿಡಿಪಿ ಗಾತ್ರವು 30 ಟ್ರಿಲಿಯನ್ ಡಾಲರ್‌ಗೆ (₹2,550 ಲಕ್ಷ ಕೋಟಿ) ತಲುಪಲಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.