
ಮುಕ್ತ ವ್ಯಾಪಾರ ಒಪ್ಪಂದ
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವೆ ಇಂದು (ಮಂಗಳವಾರ) ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಏರ್ಪಟ್ಟಿದೆ. ಇದರ ಮುಖ್ಯಾಂಶಗಳು ಇಲ್ಲಿವೆ.
*ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವಣ ಮುಕ್ತ ವ್ಯಾಪಾರ ಒಪ್ಪಂದವು ಮುುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ.
*ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಐರೋಪ್ಯ ಒಕ್ಕೂಟವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅಂದರೆ ಒಟ್ಟು ಸೇರಿ ಜಾಗತಿಕ ಜಿಡಿಪಿಯ ಶೇ 25ರಷ್ಟು ಪಾಲನ್ನು ಹೊಂದಿದೆ.
*ಯುರೋಪಿನ ಕಾರುಗಳು, ವೈನ್ ಸೇರಿ ಹಲವು ಉತ್ಪನ್ನಗಳಿಗೆ ಸುಂಕ ಇಳಿಕೆ
*ಭಾರತದ ರಫ್ತುಗಳಲ್ಲಿ ಶೇ 99ಕ್ಕಿಂತ ಹೆಚ್ಚು ಐರೋಪ್ಯ ಒಕ್ಕೂಟಕ್ಕೆ ಪ್ರವೇಶ ಪಡೆಯುವ ಮೂಲಕ ಬೃಹತ್ ಬೆಳವಣಿಗೆಯ ಸಾಮರ್ಥ್ಯವನ್ನು ತೆರೆದುಕೊಳ್ಳುತ್ತದೆ.
*ಎಂಎಸ್‌ಎಂಇಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಮಹಿಳೆಯರು, ಕುಶಲಕರ್ಮಿಗಳು, ಯುವಜನರು ಮತ್ತು ವೃತ್ತಿಪರರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
*ಎಫ್‌ಟಿಎ ಅಡಿಯಲ್ಲಿ ಜವಳಿ, ಚರ್ಮ, ಸಾಗರ ಉತ್ಪನ್ನ, ರತ್ನ, ಆಭರಣಗಳಂತಹ ಕಾರ್ಮಿಕ ಆಧಾರಿತ ವಲಯಗಳಲ್ಲಿ 33 ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ನಿರೀಕ್ಷೆ ಮಾಡಬಹುದಾಗಿದೆ.
*ಒಪ್ಪಂದ ಜಾರಿಯಾಗುವ ಮೊದಲ ದಿನವೇ ರಫ್ತು ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು.
*ಐರೋಪ್ಯ ಒಕ್ಕೂಟದ ವಾಹನಗಳು ತಮ್ಮ ಮಾದರಿಗಳ ವಾಹನಗಳನ್ನು ಭಾರತಕ್ಕೆ ಪರಿಚಯಿಸಲಿದೆ. ಮೇಕ್ ಇನ್ ಇಂಡಿಯಾ ಮೂಲಕ ಭಾರತದಿಂದಲೂ ರಫ್ತಿಗೆ ಅವಕಾಶ ಸಿಗಲಿದೆ.
*ಹೈ-ಟೆಕ್ ಉತ್ಪನ್ನಗಳಿಂದ ಭಾರತೀಯರ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.
*ಫ್ಯೂಚರ್ ರೆಡಿ ಚೌಕಟ್ಟಿನ ಮೂಲಕ ಕೌಶಲ್ಯಪೂರ್ಣ ಭಾರತೀಯರಿಗೆ ಹೆಚ್ಚಿನ ಅವಕಾಶ ತೆರೆದುಕೊಳ್ಳುತ್ತದೆ.
*ಐಟಿ/ಐಟಿಇಎಸ್, ವೃತ್ತಿಪರ ಹಾಗೂ ಶಿಕ್ಷಣ ಸೇವೆಗಳಂತಹ ಐರೋಪ್ಯ ಒಕ್ಕೂಟದ 144 ಉಪ ವಲಯಗಳಿಗೆ ಭಾರತ ಪ್ರವೇಶ ಪಡೆಯಲಿದೆ.
*ಭಾರತದ 102 ಉಪ ವಲಯಗಳಿಗೆ ಐರೋಪ್ಯ ಒಕ್ಕೂಟ ಪ್ರವೇಶ ಪಡೆಯಲಿದೆ.
*ಯುರೋಪಿನಿಂದ ಹೈ-ಟೆಕ್ ಸೇವೆ ಹಾಗೂ ಹೂಡಿಕೆಗಳು ಭಾರತಕ್ಕೆ ಬರಲಿವೆ.
*ವಾಣಿಜ್ಯೋದ್ಯಮಕ್ಕೆ ಉತ್ತೇಜನ
*ಸೇವಾ ವಲಯಗಳಲ್ಲಿ ನಿರ್ಬಂಧ ಸಡಿಲಿಕೆ
*ಐರೋಪ್ಯ ಒಕ್ಕೂಟ ಭಾರತದ 22ನೇ ಎಫ್‌ಟಿಎ ಪಾಲುದಾರನಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.