ADVERTISEMENT

ರಫ್ತು ಮೌಲ್ಯ ₹76 ಲಕ್ಷ ಕೋಟಿ ನಿರೀಕ್ಷೆ: ಜಿಟಿಆರ್‌ಐ

ಪಿಟಿಐ
Published 26 ಡಿಸೆಂಬರ್ 2025, 14:50 IST
Last Updated 26 ಡಿಸೆಂಬರ್ 2025, 14:50 IST
ರಫ್ತು
ರಫ್ತು   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ಮೌಲ್ಯವು ₹76 ಲಕ್ಷ ಕೋಟಿ ದಾಟಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ಅಂದಾಜಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ ರಫ್ತು ಮೌಲ್ಯವು ₹74 ಲಕ್ಷ ಕೋಟಿಯಷ್ಟಾಗಿತ್ತು. ಈ ಪೈಕಿ ಸರಕುಗಳ ರಫ್ತು ₹39.31 ಲಕ್ಷ ಕೋಟಿಯಷ್ಟಿದ್ದರೆ, ಸೇವೆಗಳ ರಫ್ತು ಮೌಲ್ಯವು ₹34.73 ಲಕ್ಷ ಕೋಟಿಯಷ್ಟಿತ್ತು. ಈ ರಫ್ತಿಗೆ ಹೋಲಿಸಿದರೆ ಈ ಬಾರಿ ರಫ್ತು ಪ್ರಮಾಣ ಶೇ 3ರಷ್ಟು ಹೆಚ್ಚಳ ಆಗಬಹುದು ಎಂದು ಹೇಳಿದೆ.

‘2026ರಲ್ಲಿ ದೇಶದ ರಫ್ತು ವಲಯವು ಕಠಿಣ ಪರಿಸ್ಥಿತಿ ಎದುರಿಸಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳಿಗೆ ಬೇಡಿಕೆಯಲ್ಲಿ ಮಂದಗತಿ ಹಾಗೂ ಅಮೆರಿಕದ ಸುಂಕ ಹೆಚ್ಚಳವು ದೇಶದ ರಫ್ತು ಮೇಲೆ ಪರಿಣಾಮ ಬೀರಲಿದೆ’ ಎಂದು ಜಿಟಿಆರ್‌ಐ ಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ. 

ADVERTISEMENT

ಆದರೆ, ಸೇವೆಗಳ ರಫ್ತು ₹35.88 ಲಕ್ಷ ಕೋಟಿ ದಾಟಬಹುದು. ಅದು ಒಟ್ಟು ರಫ್ತುಗಳನ್ನು ₹76 ಲಕ್ಷ ಕೋಟಿಗೆ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.