ನವದೆಹಲಿ: ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆಯು ಶೇಕಡ 6.7ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ಹೇಳಿದೆ.
ಸರ್ಕಾರದ ಕಡೆಯಿಂದ ಬಂಡವಾಳ ವೆಚ್ಚವು ಹೆಚ್ಚಳ ಕಂಡಿದ್ದು ಹಾಗೂ ವಿವಿಧ ರಫ್ತುಗಳು ಹೆಚ್ಚಾಗಿದ್ದು ಈ ಬೆಳವಣಿಗೆಗೆ ಕಾರಣ ಎಂದು ಅದು ಹೇಳಿದೆ.
ರೇಟಿಂಗ್ ಸಂಸ್ಥೆಯ ಈ ಅಂದಾಜು ಆರ್‌ಬಿಐನ ಅಂದಾಜಿಗಿಂತ ಹೆಚ್ಚಾಗಿದೆ. ಆರ್‌ಬಿಐ ಪ್ರಕಾರ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಆಗಿದೆ.
ಜೂನ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಕುರಿತ ಅಧಿಕೃತ ಅಂಕಿ–ಅಂಶಗಳು ಆಗಸ್ಟ್ 29ರಂದು ಬಿಡುಗಡೆ ಆಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.